ಪುತ್ತೂರು: ತಿಂಡಿ ಪಾರ್ಸೆಲ್‌ಗೆ ಬಂದಿದ್ದ ವೇಳೆ ಅಪರಿಚಿತ ಗುಂಪು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದೆ ಎಂದು ಕೆಮ್ಮಾಯಿ ನಿವಾಸಿ ಪ್ರವೀಣ್ ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಮ್ಮಾಯಿ ನಿವಾಸಿ ಪ್ರವೀಣ್ ತನ್ನ ಅಕ್ಕನ ಕಾರಿನಲ್ಲಿ ಕಾವೇರಿಕಟ್ಟೆ ಬಳಿ ಬಂದು ಅಲ್ಲಿ -ತಿಂಡಿ ಪಾರ್ಸೆಲ್ ತೆಗೆದುಕೊಳ್ಳುತ್ತಿದ್ದ ಸಂದರ್ಭ ಅಲ್ಲಿಯೇ ನಿಂತಿದ್ದ ನಾಲ್ಕರಿಂದ ಐದು ಮಂದಿ ಅಪರಿಚಿತರೊಂದಿಗೆ ಮಾತಿಗೆ ಮಾತು ಬೆಳೆದಿತ್ತು. ಬಳಿಕ ಅವರು ಕಾರನ್ನು ತಡೆದು ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಪ್ರವೀಣ್ ಅವರ ಜೊತೆಯಲ್ಲಿದ್ದ ಪ್ರಜ್ವಲ್ ಅವರಿಗೂ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ಪ್ರವೀಣ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆ ಪೊಲೀಸರು ಕಲಂ:115, 126(2), 352,
351(2),324 ಜೊತೆಗೆ 3(5) ಬಿ ಎನ್ ಎಸ್ 2023ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.