ಪುತ್ತೂರು: ಮುಲುಂಡ್ ಪ್ರಿಯದರ್ಶಿನಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ ಜರಗಿದ 36ನೇ ಯುರೋ ಏಷ್ಯಾ ಅಂತಾರಾಷ್ಟ್ರೀಯ ಡಬ್ಲ್ಯುಎಫ್ ಎಸ್‌ಕೆಒ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಥಾಣೆಯ ಆರೋಹಿ (ಖುಷಿ) ಹಾಗೂ ಒಂದು ರಜತ ಪದಕ ಜಯಿಸಿದ್ದಾರೆ. ಎಸ್. ಪೂಜಾರಿ ಅವರು ಭಾಗವಹಿಸಿ ಒಂದು ಚಿನ್ನ ಥಾಣೆ ಸಾವರ್ಕರ್ ನಗರ ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಮುಖ್ಯಸ್ಥ ಮೂಲತಃ ಪುತ್ತೂರು ಬೆಳ್ಳಿಪಾಡಿಯ ಶಿವಪ್ರಸಾದ್ ಪೂಜಾರಿ ಮತ್ತು ಕಾರ್ಕಳ ಬಜೆಗೋಳಿ ಮಾಳದ ಆಶಾ ಪೂಜಾರಿ ದಂಪತಿಯ ಪುತ್ರಿಯಾದ ಅವರು, ಥಾಣೆಯ ನವೋದಯ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನೃತ್ಯ, ಭಜನೆ, ಶಾಸ್ತ್ರೀಯ ಸಂಗೀತದಲ್ಲೂ ಪರಿಣತಿ ಹೊಂದಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಜರಗಿದ ಕರಾಟೆ ಚಾಂಪಿಯನ್ ಶಿಪ್ ನಲ್ಲೂ ಭಾಗವಹಿಸಿ ಚಿನ್ನ ಹಾಗೂ ರಜತ ಪದಕ ಪಡೆದಿದ್ದರು.
