ಅಕ್ಷಯ ಕಾಲೇಜಿನಿಂದ ‘ನಾವು ನಮ್ಮವರು’ ಏಕದಿನ ಶಿಬಿರ

0

ಪುತ್ತೂರು:ಅಕ್ಷಯ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಐಕ್ಯೂ ಎಸಿ ಇದರ ವತಿಯಿಂದ ‘ನಾವು ನಮ್ಮವರು’ ಎಂಬ ಶೀರ್ಷಿಕೆಯಡಿ ಏಕದಿನ ಶಿಬಿರವನ್ನು ಪ್ರಜ್ಞಾ ಆಶ್ರಮ – ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಮತ್ತು ಪುನರ್ವಸತಿ ಕೇಂದ್ರ ಬೀರಮಲೆ ಇಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಅಕ್ಷಯ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆ ಇದರ ಅಧ್ಯಕ್ಷ ಜಯಂತ ನಡುಬೈಲು ಅವರು ಉದ್ಘಾಟಸಿ, ಈ ಶಿಬಿರವು ಪ್ರಜ್ಞಾ ಆಶ್ರಮದ ಸಹಯೋಗದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಕೇಂದ್ರಗಳು ಸಮಾಜದ ವಿಶೇಷ ಅಗತ್ಯವಿರುವ ವ್ಯಕ್ತಿಗಳ ಜೀವನದಲ್ಲಿ ಆಶೆಯ ಬೆಳಕನ್ನು ತುಂಬುತ್ತಿವೆ. ಈ ಶಿಬಿರದ ಮೂಲಕ ವಿದ್ಯಾರ್ಥಿಗಳು ಮಾನವೀಯತೆ, ಸೇವಾ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಅರಿತುಕೊಳ್ಳಲು ಇದು ಉತ್ತಮ ಅವಕಾಶ. ಈ ಶಿಬಿರವು ಎಲ್ಲರಲ್ಲೂ ಸಕಾರಾತ್ಮಕ ಚಿಂತನೆ, ಸಹಾನುಭೂತಿ ಮತ್ತು ಸೇವಾ ಮನೋಭಾವವನ್ನು ಬೆಳೆಸಲಿ  ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜ್ಞಾ ಆಶ್ರಮ, ಬಿರುಮಲೆಯ ಪ್ರತಿನಿಧಿ ಅಣ್ಣಪ್ಪ ವಿ. ಎಂ. ವಹಿಸಿ ಮಾತನಾಡಿ, ಮಾನಸಿಕ ವಿಕಲಚೇತನರ ಸೇವೆ ಮಾನವೀಯ ಕರ್ತವ್ಯವಾಗಿದ್ದು, ಎಲ್ಲರೂ ಸಮಾಜ ಸೇವೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಹಾನುಭೂತಿ ಮತ್ತು ಸೇವಾ ಮನೋಭಾವವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಎನ್‌.ಎಸ್‌.ಎಸ್‌. ಘಟಕ-I ರ ಕಾರ್ಯಕ್ರಮಾಧಿಕಾರಿ ರಾಕೇಶ್ ಕೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಹಾಗೆಯೇ ಕಾರ್ಯಕ್ರಮದಲ್ಲಿ ಎನ್‌.ಎಸ್‌.ಎಸ್‌. ಘಟಕ-II ರ ಕಾರ್ಯಕ್ರಮಾಧಿಕಾರಿ ಕು. ಮೇಘಶ್ರೀ , ಸಹಯೋಜನಾಧಿಕರಿ ಕು. ಸೌಜನ್ಯ, ಕಾಲೇಜಿನ ವಿದ್ಯಾರ್ಥಿ ನಾಯಕ ಹಾಗೆಯೇ ಎನ್‌.ಎಸ್‌.ಎಸ್‌. ಘಟಕ-I ಮತ್ತು II ರ ನಾಯಕರು ಉಪಸ್ಥಿತರಿದ್ದರು.

ನಂತರ ಹಿರಿಯ ಎನ್‌.ಎಸ್‌.ಎಸ್‌ ಸ್ವಯಂ ಸೇವಕರು ಕಿರು ನಾಟಕ ಪ್ರದರ್ಶಿಸಿದರು ಹಾಗೆಯೇ ವಿಶೇಷ ಚೇತನರಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ನಡೆಸಿ ಬಹುಮಾನ ವಿತರಿಸಲಾಯಿತು. ನಂತರ ಪ್ರಜ್ಞಾ ಆಶ್ರಮದ ಸುತ್ತಲಿನ ಪರಿಸರ ಸ್ವಚ್ಛತಾ ಕಾರ್ಯವನ್ನು ಸ್ವಯಂ ಸೇವಕರು ನಡೆಸಿದರು.

ಕಾರ್ಯಕ್ರಮವನ್ನು ಎನ್‌.ಎಸ್‌.ಎಸ್‌ ಸ್ವಯಂ ಸೇವಕಿ ಕು. ಪ್ರಜ್ಞಾ ಬಿ ಎಸ್ ಪ್ರಾರ್ಥಿಸಿ, ಘಟಕ ನಾಯಕ ಸುಹಾಸ್ ಸ್ವಾಗತಿಸಿ, ಕು. ಅಪೇಕ್ಷಾ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here