ಪುತ್ತೂರು: ಕಾಣಿಯೂರು ಗ್ರಾಮದ ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ನಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆಯ್ದ ಸ್ಥಳೀಯ ಆಟಗಾರರ ನಿಗದಿತ 10 ತಂಡಗಳ ಪ್ರೊ ವಾಲಿಬಾಲ್ ಪಂದ್ಯಾಟ ಮತ್ತು ಸ್ಥಳೀಯರಿಗೆ ಆಟೋಟ ಸ್ಪರ್ಧೆ, ಸನ್ಮಾನ, ಪ್ರತಿಭಾ ಪುರಸ್ಕಾರ, ಅಶಕ್ತ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ಅ.19ರಂದು ಪುಣ್ಚತ್ತಾರಿನಲ್ಲಿ ನಡೆಯಲಿದೆ ಎಂದು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ನ ಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ಪೈಕ ಅವರು ಪುತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಬೆಳಗ್ಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಈರಯ್ಯ ಡಿ.ಎನ್ ಉದ್ಘಾಟಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ನ ಗೌರವಾಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ.ಜಿಲ್ಲೆ ಅಪರ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಯೆಸ್ ಭೂಮರೆಡ್ಡಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮಾಜ ಸೇವಾ ಟ್ರಸ್ಟ್ನ ರವಿ ಕಕ್ಕೆಪದವು, ತುಂಬೆ ಐಟಿಐ ಪ್ರಾಂಶುಪಾಲ ನವೀನ್ ಕೆ.ಎಸ್, ದ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಪುಣ್ಚತ್ತಾರು ಸಾರ್ವಜನಿಕ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷ ಸುಧಾ ನಾವೂರು ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಅನೇಕ ಮಂದಿ ಗೌರವ ಉಪಸ್ಥಿತಿಯಲ್ಲಿದ್ದಾರೆ.
ಹಲವು ಸೌಲಭ್ಯ ವಿತರಣೆ:
ಸಂಸ್ಥೆಯಿಂದ ಅಶಕ್ತ ನಾಲ್ವರು ಬಡಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ವಿತರಣೆ ಮಾಡಲಾಗುವುದು. ಸ್ಥಳೀಯ ಅಂಗನವಾಡಿ ಕೇಂದ್ರ ಏಲಡ್ಕ ಬಂಡಾಜೆಗೆ ರೂ.15ಸಾವಿರ ಮೌಲ್ಯದ ವಾಟರ್ ಪ್ಯೂರಿಫಯರ್ ಹಸ್ತಾಂತರ ನಡೆಯಲಿದೆ. ವಿವಿಧ ಕ್ಷೇತ್ರಗಳ ಸಾಧಕರಾದ ನಿವೃತ್ತ ಸುಭೇದಾರ್ ಗಿರೀಶ ನೂಜಿ, ರಾಜ್ಯಮಟ್ಟದ ಯೋಗ ಮತ್ತು ರಾಜ್ಯಮಟ್ಟದ ಚದುರಂಗ ಕ್ರೀಡಾಪಟು ಕು.ಸಾನ್ವಿಕ ಹೆಚ್ ಶೇರ, ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ದಿನೇಶ್ ಶೆಟ್ಟಿಗಾರ್ ಕೊಡಪದವು, ಸಾಹಿತ್ಯ ಕ್ಷೇತ್ರದಲ್ಲಿ ಚಾರ್ವಾಕ ಪಾಲ್ತಿಲದ ಸುರೇಶ್ ಕುಮಾರ್ ಅವರನ್ನು ಸನ್ಮಾನಿಸಲಾಗುವುದು. 2024-25ನೇ ಸಾಲಿನ 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಬೊಬ್ಬೆಕೇರಿ ಶಾಲೆಯ ಕುಮುದಾ, 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಾಣಿಯೂರು ಶಾಲೆಯ ಶಿವಜಿತ್ ವೈ ಜೆ ಅವರಿಗೆ ಪ್ರತಿಭಾಪುರಸ್ಕಾರ ವಿತರಿಸಲಾಗುವುದು ಎಂದು ರಾಧಾಕೃಷ್ಣ ಪೈಕ ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಶ್ರೀಹರಿ ಭಜನಾ ಮಂಡಳಿ ಗೌರವಾಧ್ಯಕ್ಷ ಐ ನಾರಾಯಣ ಗೌಡ ಇಡ್ಯಡ್ಕ, ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ನ ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಸದಸ್ಯರಾದ ಅಶ್ವಿನ್ ಕರಿಮಜಲು, ರಂಜಿತ್ ಉಪಸ್ಥಿತರಿದ್ದರು.