ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನಾ ವಾಣಿಜ್ಯ ವಿಭಾಗದ ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ‘ಕಾಮ್ ಅಕ್ಯೂಮನ್ 2K25 . ಇನ್ಟ್ರಾ ಡಿಪಾರ್ಟ್ಮೆಂಟ್ ವಾಣಿಜ್ಯ ಫೆಸ್ಟ್ ನಡೆಯಿತು. ಈ ಕಾರ್ಯಕ್ರಮವನ್ನು ಕಲಾವತಿ ಜಯಂತ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ತಮ್ಮ ಸಂಘದ ಲೋಗೋ ಮತ್ತು ರೋಲಿಂಗ್ ಟ್ರೋಫಿಯನ್ನು ಬಿಡುಗಡೆ ಮಾಡಲಾಯಿತು.

ಮುಖ್ಯ ಅತಿಥಿ ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ, ಉದ್ಯಮಿ ನಿಹಾಲ್ ಪಿ ಶೆಟ್ಟಿ ವಿದ್ಯಾರ್ಥಿಗಳು ತಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಬರುವ ಅವಕಾಶಗಳನ್ನು ಸದುಪಯೋಗಿಸಿಕೊಂಡು ಹಾಗೆಯೇ ಉಜ್ಜಲ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಇನ್ನೋರ್ವ ಮುಖ್ಯ ಅತಿಥಿಗಳಾದ ನಾಗೇಶ್ ಆಚಾರ್ಯ ಇವರು ಮಾತನಾಡಿ ನಾಯಕತ್ವ, ಸಂವಹನ ಮತ್ತು ಮಾರಾಟ ಕೌಶಲ್ಯಗಳು ಯಶಸ್ಸಿಗೆ ಪ್ರಮುಖವಾಗಿವೆ. ಮಾರ್ಗದರ್ಶನಕ್ಕಾಗಿ ಮಾರ್ಗದರ್ಶಕರು ಮತ್ತು ಶಿಕ್ಷಕರೊಂದಿಗೆ ಸಂಪರ್ಕ ಸಾಧಿಸಿವುದು ಬಹಳ ಮುಖ್ಯವಾಗಿದೆ .ವೈಯಕ್ತಿಕ ಪ್ರಯತ್ನ ಮತ್ತು ಇತರರಿಂದ ಕಲಿಕೆಯ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಯಂತ್ ನಡುಬೈಲ್ ಈ ಕಾರ್ಯಕ್ರಮವು ನಮ್ಮ ವಿದ್ಯಾರ್ಥಿಗಳಿಗೆ ಅವರ ಆಲೋಚನಾ ಶಕ್ತಿಯನ್ನು ಹೆಚ್ಚಿಸಲು ಉಪಯುಕ್ತವಾಗಿದೆ .ಚುರುಕುತನ ನಮ್ಮನ್ನು ಜೀವನದಲ್ಲಿ ಮುನ್ನಡೆಸುತ್ತದೆ. ಸಿಕ್ಕ ಅವಕಾಶವನ್ನು ಸದುಪಯೋಗಿಸಕೊಳ್ಳಬೇಕು. ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳಲ್ಲಿ ದೊರೆದಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ ಎಂದರು.
ಈ ಕಾರ್ಯಕ್ರಮದ ಬೆಸ್ಟ್ ಮ್ಯಾನೇಜರ್ – ಪ್ರಥಮ ಬಹುಮಾನ ಜನನಿ , ಮಾರ್ಕೆಟಿಂಗ್ – ಪ್ರಥಮ ಬಹುಮಾನ ಬಕೀರ್ ನಜ್ಮಿ, ಫ್ಯೆನಾನ್ಸ್ -ಪ್ರಥಮ ಬಹುಮಾನ ಪ್ರೇಕ್ಷಾ ಬಿ.ಸಿ, ಯಶ್ವಿನಿ, ಇನೋವೆಷನ್ – ಪ್ರಥಮ ಬಹುಮಾನ ಹರ್ಷರಾಜ್, ಕಾರ್ತಿಕ್, ಸೂರ್ಯ, ಅವಿಶ್ , ಡು ಆರ್ ಡೈ -ಪ್ರಥಮ ಬಹುಮಾನ ದೀಪ್ತಿ ಎಸ್, ಪೂಜಾ ಎಂ.ಎಸ್, ವಿದ್ಯಾ ಎಸ್, ಆಸಿನಾ ,ಕೃತಿಕಾ ಪಿ.ಆರ್ ಬಹುಮಾನಗಳನ್ನು ಪಡೆದುಕೊಂಡರು. “ಕಾಮ್ ಅಕ್ಯೂಮನ್ 2K25” ಈ ಫೆಸ್ಟ್ ನ ಚಾಂಪಿಯನ್ ಶಿಪ್ ಅನ್ನು ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮುಡಿಗೇರಿಸಿಕೊಂಡರು.

ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್ ನ ಸಂಯೋಜಕಿ ಮೇಘಶ್ರೀ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಕಿಶೋರ್ ಕುಮಾರ್ ರೈ, ರಕ್ಷಣ್ ಟಿ.ಆರ್ ಉಪಪ್ರಾಂಶುಪಾಲರು, ರಶ್ಮಿ ಐಕ್ಯೂಎಸಿ ಸಂಯೋಜಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸುಶ್ಮಿತಾ ಪ್ರಾರ್ಥಿಸಿ, ಶ್ರಾವ್ಯ ಉದ್ಘಾಟನಾ ಕಾರ್ಯಕ್ರಮವನ್ನು ನಿರೂಪಿಸಿದರು . ಸಂಘದ ಅಧ್ಯಕ್ಷ ವಿಖ್ಯಾತ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ವಿಂಧುಶ್ರೀ ವಂದಿಸಿ,ನಿಹಾ ಕಾರ್ಯಕ್ರಮವನ್ನು ನಿರೂಪಿಸಿದರು.