




ಪುತ್ತೂರು:ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ, ಪುತ್ತೂರು, ಇದರ ವತಿಯಿಂದ ಡಾ.ಕೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ’ಪ್ರತಿಭಾ ದರ್ಪಣ’ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯು ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.



ವಿಜೇತ ವಿದ್ಯಾರ್ಥಿಗಳು : ದರ್ಶಿನಿ – ಕನ್ನಡ ಭಾಷಣ (ಪ್ರಥಮ), ವಿಘ್ನೇಶ್ ವಿಶ್ವಕರ್ಮ – ಚಿತ್ರಕಲೆ (ಪ್ರಥಮ), ಸಾಯೀಶ್ವರಿ -ಚರ್ಚಾಸ್ಪರ್ಧೆ (ಪ್ರಥಮ), ಮೌಲ್ಯ.ಜಿ – ಆಶುಭಾಷಣ (ಪ್ರಥಮ), ಶ್ರೀರಕ್ಷಾ – ಸಂಸ್ಕೃತ ಭಾಷಣ (ದ್ವಿತೀಯ), ಮುಕುಂದ -ಸಂಸ್ಕೃತ ಧಾರ್ಮಿಕ ಪಠಣ (ದ್ವಿತೀಯ), ಶ್ರಾವ್ಯ – ರಂಗೋಲಿ(ದ್ವಿತೀಯ), ಸಾಯೀಶ್ವರಿ ಮತ್ತು ತಂಡ- ಕವ್ವಾಲಿ (ದ್ವಿತೀಯ), ಕರಣ್- ಭಾವಗೀತೆ (ತೃತೀಯ), ಲಾಸ್ಯ ಎನ್.ವಿ- ಭರತನಾಟ್ಯ(ತೃತೀಯ), ಶ್ರೀರಕ್ಷಾ – ಕವನ ವಾಚನ (ತೃತೀಯ), ಕುಶಿತಾ- ಗಝಲ್(ತೃತೀಯ), ಧನುಷ್ ಮತ್ತು ಚರಿತ್ – ರಸಪ್ರಶ್ನೆ (ತೃತೀಯ)
ಸ್ಥಾನವನ್ನು ಪಡೆದುಕೊಂಡಿದ್ದಾರೆ.














