ಪುತ್ತೂರು: ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಆಲಂಕಾರು ಬೈದಶ್ರೀ ಸಹಕಾರ ಸೌಧದಲ್ಲಿರುವ ಪ್ರಧಾನ ಕಚೇರಿಯಲ್ಲಿ ಅ.21ರಂದು 20ನೇ ವರ್ಷದ ಧನಲಕ್ಷ್ಮೀ ಪೂಜೆ ನಡೆಯಿತು.

ಕೃಷ್ಣಪ್ರಸಾದ್ ಉಪಾಧ್ಯಾಯ ಅರ್ಬಿ ಇವರ ಪೌರೋಹಿತ್ಯದಲ್ಲಿ ಪೂಜೆ ನಡೆಯಿತು. ೨೦ ವರ್ಷಗಳಿಂದ ನಿರಂತರವಾಗಿ ಧನಲಕ್ಷ್ಮಿ ಪೂಜೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸುತ್ತಿದ್ದು ಈ ಸಂಸ್ಥೆಯು ಇನ್ನಷ್ಟು ಯಶಸ್ವಿಯಾಗಿ ಮುನ್ನಡೆಯಲಿ ಹಾಗೂ ಸಂಸ್ಥೆಯ ಸರ್ವತೋಮುಖ ಅಭಿವೃದ್ದಿಗಾಗಿ ಪ್ರಾರ್ಥಿಸಲಾಯಿತು. ಸಂಘದ ಅಧ್ಯಕ್ಷರಾದ ಎನ್. ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಉಪಾಧ್ಯಕ್ಷರಾದ ಜನಾರ್ದನ ಪೂಜಾರಿ ಕದ್ರ, ನಿರ್ದೇಶಕರಾದ ಜಯಕರ ಪೂಜಾರಿ ಕಲ್ಲೇರಿ, ಸಂತೋಷ್ ಕುಮಾರ್ ಮತ್ರಾಡಿ, ಗಂಗಾರತ್ನ ವಸಂತ ಎ., ಜಯಂತ ಪೂಜಾರಿ ನೆಕ್ಕಿಲಾಡಿ, ಆನಂದ ಪೂಜಾರಿ ಮಠದಬೈಲು, ಲಕ್ಷ್ಮೀಶ ಬಂಗೇರ ಪೆಲತ್ತೋಡಿ, ವಿಜಯ ಅಂಬಾ, ವಾಸಪ್ಪ ಪೂಜಾರಿ ಕೇಪುಳು, ಮಾಜಿ ನಿರ್ದೇಶಕರಾದ ತಿಮ್ಮಪ್ಪ ಪೂಜಾರಿ ಕಿನ್ನಿಗೋಳಿ, ಕೊಯಿಲ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ಅಶೋಕ್ ಕೊಯಿಲ, ಉಪಾಧ್ಯಕ್ಷರಾದ ಶ್ರೀಧರ ಪೂಜಾರಿ ತುಂಬೆತ್ತಡ್ಕ, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಮಾಧವ ಪೂಜಾರಿ ಕಯ್ಯಪ್ಪೆ, ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರವಿ ಪೂಜಾರಿ ಕುಂಞಲಡ್ಡ, ಬಿಲ್ಲವ ಸಂಘ ಆಲಂಕಾರು ವಲಯ ಸಂಚಾಲಕರಾದ ಪುರುಷೋತ್ತಮ ಬರೆಂಬೆಟ್ಟು, ಬಿಲ್ಲವ ಗ್ರಾಮ ಸಮಿತಿ ಆಲಂಕಾರು ಇದರ ಅಧ್ಯಕ್ಷರಾದ ಚಂದ್ರಶೇಖರ ಪಟ್ಟೆಮಜಲು, ಬಿಲ್ಲವ ಗ್ರಾಮ ಸಮಿತಿ ಪೆರಾಬೆ-ಕುಂತೂರು ಇದರ ಅಧ್ಯಕ್ಷರಾದ ಉದಯ ಎಣ್ಣೆತ್ತೋಡಿ, ಕೋಟಿ ಚೆನ್ನಯ್ಯ ಮಿತ್ರವೃಂದ ಆಲಂಕಾರು ಇದರ ಅಧ್ಯಕ್ಷರಾದ ರಮೇಶ್ ಕೇಪುಳು, ಬಿಲ್ಲವ ಸಂಘದ ಪ್ರಮುಖರಾದ ದಿನೇಶ್ ಕೇಪುಳು, ಉದಯ ಸಾಲ್ಯಾನ್ ಮಾಯಿಲ್ಗ, ರವಿಚಂದ್ರ ಮಾಯಿಲ್ಗ, ಬ್ಯಾಂಕಿನ ಇಂಜಿನಿಯರ್ ಆದ ಲಕ್ಷ್ಮಿನಾರಾಯಣ ಅಲೆಪ್ಪಾಡಿ, ಬ್ಯಾಂಕಿನ ಸರಾಫರಾದ ಯೋಗೀಶ ಆಚಾರ್ಯ, ಶಾಖಾ ಸಲಹಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಂಘದ ಗ್ರಾಹಕರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್ ಕುಮಾರ್ ಅಗತ್ತಾಡಿ, ಸಿಬ್ಬಂದಿಗಳು, ಪಿಗ್ಮಿ ಸಂಗ್ರಾಹಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.