ಪುತ್ತೂರು: ತಾಲೂಕಿನ ಸಂಪ್ಯದಲ್ಲಿ ಕಳೆದ ಹದಿನಾರು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸುಬ್ರಾಯ ಆಚಾರ್ಯ ಹಾಗೂ ರವಿಚಂದ್ರ ಆಚಾರ್ಯ ಸಂಪ್ಯ ಆರ್ಯಾಪು ಇವರ ಮಾಲಕತ್ವದ ಚಿನ್ನಾಭರಣ ತಯಾರಿಕಾ ಮಳಿಗೆ ಅಕ್ಷಯ ಜ್ಯುವೆಲರಿ ವರ್ಕ್ಸ್ ಸಂಪ್ಯ ಕಂಬಳತ್ತಡ್ಡ ಎಂಬಲ್ಲಿನ ಸ್ವಂತ ಕಟ್ಟಡದಲ್ಲಿ ಅ.19 ರಂದು ವೇದಮೂರ್ತಿ ಸಂದೀಪ್ ಕಾರಂತ್ ಕಾರ್ಪಾಡಿ ಇವರು ಲಕ್ಷ್ಮಿ ಪೂಜೆಯನ್ನು ನೆರೆವೇರಿಸುವ ಮೂಲಕ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಸುಬ್ರಾಯ ಆಚಾರ್ಯ ಹಾಗೂ ರವಿಚಂದ್ರ ಆಚಾರ್ಯ ಮಾಲಕತ್ವದ ನೂತನ ಮಳಿಗೆಯನ್ನು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ಸಂಪ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ವೇದಮೂರ್ತಿ ಸಂದೀಪ್ ಕಾರಂತ್ ಕಾರ್ಪಾಡಿ, ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಸತೀಶ್ ರೈ ಮಿಷನ್ ಮೂಲೆ, ಶ್ರೀಮತಿ ವಿಜಯ ಎ.ಪಿ. ರೈ, ಕಾರ್ಪಾಡಿ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸದಾನಂದ ಶೆಟ್ಟಿ ಕೂರೇಲು, ಲಕ್ಷ್ಮಿನಾರಾಯಣ ಭಟ್ ಕೊಲ್ಯ, ಪಿ.ಬಿ. ಶಿವಕುಮಾರ್, ಸತೀಶ್ ನ್ಯಾಕ್ ಪರ್ಲಡ್ಕ, ವಿಜಿತ್ ಜ್ಯುವೆಲ್ಲರಿ ಪುತ್ತೂರು ಇದರ ಮಾಲಕ ಅಚ್ಯುತ ಆಚಾರ್ಯ, ಸಂತೋಷ್ ರೈ ಕೈಕಾರ, ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ವಿಜಯ ಬಿ.ಎಸ್. ಸಂಪ್ಯ, ಸಂಪ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಲಕ್ಷ್ಮಣ ಬೈಲಾಡಿ, ಜಯಂತ ಶೆಟ್ಟಿ ಕಂಬಳತ್ತಡ್ಡ, ಪಣಿರಾಜ್ ಜೈನ್ ಗುತ್ತಿನ ಮನೆ, ಮಂಜಪ್ಪ ರೈ ಬಾರಿಕೆ ಮನೆ, ಬಾಲಚಂದ್ರ ಗೌಡ ಕಾರ್ಪಾಡಿ, ರವೀಂದ್ರ ಶೆಟ್ಟಿ ಕಂಬಳತ್ತಡ್ಡ ಹಾಗೂ ಇತರ ಹಲವಾರು ಗಣ್ಯರು ಹಾಜರಿದ್ದರು. ಕಾರ್ಯಕ್ರಮವನ್ನು ನೇಮಾಕ್ಷ ಸುವರ್ಣ ಅಮ್ಮುಂಜ ನಿರೂಪಿಸಿದರು.