






ಪುತ್ತೂರು: ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಪುನಃ ತೆರೆಯುವಂತೆ ಮತ್ತು ಸ್ಥಗಿತಗೊಂಡಿರುವ ಅನುದಾನಗಳನ್ನು ಮರಳಿ ನೀಡುವಂತೆ ಕೋರಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಮುಖ್ಯಮಂತ್ರಿಗಳಿಗೆ, ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.


ಅನುದಾನಗಳ ಕೊರತೆಯಿಂದ ಈ ಕೇಂದ್ರ ಬಂದ್ ಮಾಡಲಾಗಿದೆ. ಇದರಿಂದ ಅನೇಕ ಜನರಿಗೆ ತೊಂದರೆ ಆಗಿರುತ್ತದೆ. ಬಹಳ ಕಡಿಮೆ ವೆಚ್ಚದಲ್ಲಿ ಸಾರ್ವಜನಿಕರು ಈ ಕೇಂದ್ರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವ ನೈಸರ್ಗಿಕ ಈ ಚಿಕಿತ್ಸಾ ಪದ್ಧತಿ ಬಹಳ ಜನರಿಗೆ ಪ್ರಯೋಜನಕಾರಿಯಾಗಿತ್ತು. ಈ ಕೇಂದ್ರ ಬಂದ್ ಆಗಿರುವುದರಿಂದ ಜನ ಈ ಪ್ರಯೋಜನದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಬಂದ್ ಆಗಿರುವ ಕಾರಣಗಳನ್ನು ಪರಿಶೀಲಿಸಿ ಮರಳಿ ಕೇಂದ್ರ ತೆರೆಯುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.













