ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದಲ್ಲಿ ಲಕ್ಷ್ಮೀಪೂಜೆ

0

ನೆಲ್ಯಾಡಿ: ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ವತಿಯಿಂದ ಲಕ್ಷ್ಮೀ ಪೂಜೆಯನ್ನು ಭಕ್ತಿಭಾವಪೂರ್ಣವಾಗಿ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಸಂಘದ ಕಚೇರಿಯಲ್ಲಿ ಆಯೋಜಿಸಲಾಯಿತು.

ಅರ್ಚಕರಾದ ಅಮೃತ ಸರಳಾಯ ಅವರ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಧನ, ಧಾನ್ಯ, ಐಶ್ವರ್ಯಗಳ ದೇವಿಯಾದ ಶ್ರೀ ಲಕ್ಷ್ಮೀ ದೇವಿಯ ಆರಾಧನೆ ನೆರವೇರಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯೆಯರು ಹಾಗೂ ಸ್ಥಳೀಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಸಂಘದ ಅಧ್ಯಕ್ಷೆ ಉಷಾ ಅಂಚನ್ ಅವರು ಆಗಮಿಸಿದ ಎಲ್ಲ ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಲಕ್ಷ್ಮೀ ಪೂಜೆಯ ಪ್ರಯುಕ್ತ ಸಂಘದ ನಿರ್ದೇಶಕರಿಗೆ ಸ್ಮರಣಿಕೆಗಳನ್ನು ವಿತರಿಸಲಾಯಿತು. ಆಗಮಿಸಿದ ಎಲ್ಲರಿಗೂ ಪೂಜಾಪ್ರಸಾದ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ಅಕ್ಷಯ ಕಾಲೇಜಿನ ಸ್ಥಾಪಕರಾದ ಜಯಂತ್ ನಡುಬೈಲು, ನೆಲ್ಯಾಡಿ–ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್ ದುರ್ಗಾಶ್ರೀ, ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ, ಕಡಬ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ನಿವೃತ್ತ ದೈಹಿಕ ಶಿಕ್ಷಕ ಉಲಹ್ನನನ್, ನೆಲ್ಯಾಡಿಯ ವಿವಿಧ ಸೇವಾ ಸಹಕಾರಿ ಬ್ಯಾಂಕ್‌ಗಳ ಪ್ರಬಂಧಕರು ಹಾಗೂ ಸಿಬ್ಬಂದಿಗಳು, ಸಂಘದ ನಿರ್ದೇಶಕರರು, ಬ್ಯಾಂಕಿನ ಕಾರ್ಯನಿರ್ವಣಾಧಿಕಾರಿ ಚೈತನ್ಯ ಹಾಗೂ ಸಿಬ್ಬಂದಿಗಳು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here