ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಶೈಕ್ಷಣಿಕ ಸಾಧಕರಿಗೆ ಅಭಿನಂದನೆ

0

ಪುತ್ತೂರು:ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾಪುರಸ್ಕಾರ ನೀಡಿ ಅಭಿನಂದಿಸಲಾಯಿತು.


ಮುಖ್ಯ ಅತಿಥಿಯಾಗಿದ್ದ ಸಾಹಿತಿ, ಲೇಖಕ ಚಿಂತಕರಾಗಿರುವ ಬಿ. ವಿ. ಸೂರ್ಯನಾರಾಯಣ ಮಾತನಾಡಿ, ಸಾಧಕ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹಿಸಿದಾಗ ಇತರ ವಿದ್ಯಾರ್ಥಿಗಳೂ ಪ್ರೇರಿತರಾಗಿ ಸಾಧನೆಯತ್ತ ತಮ್ಮ ಹೆಜ್ಜೆಯನ್ನು ಇಡಲು ಸಹಕಾರಿಯಾಗುತ್ತದೆ. ಜೊತೆಗೆ ಗೌರವಕ್ಕೆ ಪಾತ್ರರಾದ ವಿದ್ಯಾರ್ಥಿಗಳು ತಮ್ಮ ಸಾದನೆಯ ಹಿಂದಿರುವ ಪ್ರೇರಕ ಶಕ್ತಿಗಳನ್ನು ನೆನಪಿಸಿಕೊಳ್ಳಬೇಕು. ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ, ಉನ್ನತ ಉದ್ಯೋಗ ಪಡೆದು ಸಮಾಜಕ್ಕೆ ತಮ್ಮಿಂದಾಗುವ ಸಹಾಯವನ್ನು ನೀಡುವ ಒಳ್ಳೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಸಂಘದ ಅಧ್ಯಕ್ಷರಾಗಿರುವ ನವೀನ್‌ರವರು ತನ್ನ ವಿದ್ಯಾರ್ಥಿ. ಈಗ ಗುರು ಶಿಷ್ಯರು ಒಂದೇ ವೇದಿಕೆಯಲ್ಲಿರುವು ಬಹಳಷ್ಟು ಸಂತಸ ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನವೀನ್ ಡಿ.ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಕ ಮತ್ತು ಪೋಷಕರ ಪಾತ್ರ ಎಷ್ಟು ಮುಖ್ಯವೋ ಅವರನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವುದೂ ಸಮಾಜದ ಕರ್ತವ್ಯ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ 15 ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗಿದೆ. ಈ ಸಾಲಿನಲ್ಲಿ ೨೦ ವಿದ್ಯಾರ್ಥಿಗಳನ್ನು ಗುರುತಿಸಿಲಾಗಿದೆ. ವಿದ್ಯಾರ್ಥಿಗಳು ವಿಶಿಷ್ಟವಾದ ಸಾಧನೆಯನ್ನು ಮಾಡಿ ಉನ್ನತ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಯನ್ನು ಪಡೆಯಬೇಕು ಎಂಬುದು ನಮ್ಮೆಲ್ಲರ ಸದಾಶಯವಾಗಿದೆ. ಈ ಹಿಂದೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಮಾತ್ರ ಗುರುತಿಸಲಾಗುತ್ತಿತ್ತು. ಈ ಬಾರಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಲ ಹಿಂದಿನ ರೂವಾರಿಗಳಾಗಿರುವ ಸಾಧಕ ಶಿಕ್ಷಕರನ್ನು ಗೌರವಿಸುತ್ತಿರುವುದು ವಿಶೇಷವಾಗಿದೆ ಎಂದರು.


ಸನ್ಮಾನ
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನ ವಿದ್ಯಾರ್ಥಿಗಳಾದ ಎಸ್‌ಎಸ್‌ಎಲ್‌ಸಿಯಲ್ಲಿ ಅಚಿಂತ್ಯ ಉಂಗ್ರಪುಳಿತ್ತಾಯ ಕೆ. ಯಶ್ವಿನ್ ಎಂ. ಕ್ರಿಷ್ಣನ್ ದೀಕ್ಷಿತ್ ತೋರಸ್, ಮಹಮ್ಮದ್ ಸುಹಾನ್, ಧ್ಯಾನ್ ಎಸ್ ಹೆಬ್ಬಾರ್, ಅಮ್ನಾ ಫಾತಿಮಾ, ಆಯಿಷತ್ ಹೆನ್ನಾ ಎ.ಎ., ನಂದನ್ ಕೆ. ಹೆಜ್., ರಿಧಿ ಆರ್.ಗೌಡ, ಸಾಧನ್ ಪಿ, ನವ್ಯಶ್ರೀ, ಸ್ವಸ್ತಿಕ್ ಶೆಟ್ಟಿ, ತನುಶ್ ಎಂ. ಧನ್ವಿ, ಲಿಖಿತ ನಾಯಕ್ ಎನ್, ಎಸ್ ಭಾಗ್ಯಶ್ರೀ ಪ್ರಭು, ಇಂಚರಾ ಮುಂಡೋಡಿ, ಎ ವಿವೇಕ್, ಪ್ರತಿಕ್ಷಾ, ಖದಿಜತುಲ್ ಅಸ್ಟಿಯಾ, ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸ್ವಾತಿ, ಸಂಜನಾ ನಾಯಕ್ ವೈ, ಹರ್ಷಿತ್ ಎಸ್ ನಾಕ್, ಯಶಸ್ವಿ ಬಿ.ಕೆ., ಅಭಿಜಿತಾ ಎಸ್. ಅಭಿನವ ಟಿ.ಎಸ್., ದೀಕ್ಷಾ, ವೃಂದ ಜೆ. ಗೌಡ, ಪಾವನಿ ಕೆ.. ಸ್ಪೂರ್ತಿ ಎಸ್. ಅನುಷಾ ನಾಯಕ್ ಎನ್., ನಿಶಾ, ಸಿಂಚನಾ ಬಿ.ಎಸ್., ಹರ್ಷಿತ್ ಕುಮಾರ್ ಎಸ್.ಎಂ., ಆತ್ಮಿಕಾ ವಿ., ಸಿಂಚನಾ ಕೆ.ಸಿ., ನಿಶಾಂತ್ ರೈ, ಹರ್ಷಿತ್ ಕುಮಾರ್, ನಿಖಿತಾ ಬಿ. ಎಸ್, ಸ್ಪಂದನಾ ಎಸ್. ಇವರುಗಳನ್ನು ಸನ್ಮಾನಿಸಲಾಯಿತು. ಈ ಸಾಲಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಗನ್ನಾಥ ಎಸ್., ಪಿಎಚ್‌ಡಿ ಪದವಿ ಪಡೆದ ಸ್ನೇಹಾ ಬಿ.ಎಸ್. ಅವರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷೆ ಪವಿತ್ರಾ ಕೆ. ಪಿ., ನಿರ್ದೇಶಕರಾದ ವಿಶ್ವನಾಥ ಬಲ್ಯಾಯ ಮುಂಡೋಡಿ, ನಮಿತ ನಾಕ್, ಜಯರಾಮ ಪೂಜಾರಿ ಒತ್ತೆಮುಂಡೂರು, ದೇವಪ್ಪ ಗೌಡ ಓಲಾಡಿ, ದೇವಪ್ಪ ಪಜಿರೋಡಿ, ಬಿ. ಶಿವಪ್ರಸಾದ್ ನಾಯ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಹೆಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಿಂಚನಾ, ಶ್ರೀರಕ್ಷಾ, ಭವಿತ್ ಇಂದಿರಾನಗರ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಜಯರಾಮ ಹೆಚ್‌ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಹೆಚ್ ವಂದಿಸಿದರು ನಿರ್ದೇಶಕ ವಿಶ್ವನಾಥ ಬಲ್ಯಾಯ ಮುಂಡೋಡಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಅಶ್ವಿತಾ, ರೇಷ್ಮಾ, ನಳಿನಿ ಬಿ. ಕೆ.. ಮೇಘಾ, ಶ್ರಾವ್ಯ ಎ ಶಾಂತಿಗೋಡು ಸನ್ಮಾನ ಪತ್ರವನ್ನು ವಾಚಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಗನ್ನಾಥ ಎಸ್ ಹಾಗೂ ವಿದ್ಯಾರ್ಥಿನಿ ಪಾವನಿ ಕೆ. ಅನಿಸಿಕೆ ವ್ಯಕ್ತಪಡಿಸಿದರು. ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಕೆ. ಸಿಬ್ಬಂದಿಗಳಾದ ಜಯರಾಮ ಬಿ, ರೋಹಿತ್ ಪಿ. ಜಿತೇಶ್ ಎಸ್ ಹಾಗೂ ಸಹಾಯಕರು ಸಹಕರಿಸಿದರು.

LEAVE A REPLY

Please enter your comment!
Please enter your name here