ವಿದ್ಯಾರಶ್ಮಿ ವಿದ್ಯಾಲಯದಲ್ಲ್ಲಿ ಸಾಹಿತ್ಯ ನಿನಾದ ಕಾರ್ಯಕ್ರಮ

0

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲ್ಲಿ ಅ.27ರಂದು ಸಾಹಿತ್ಯ ಸಂಘದ ಆಶ್ರಯದಲ್ಲಿ ಸಾಹಿತ್ಯ ನಿನಾದ ಕಾರ್ಯಕ್ರಮ ನಡೆಯಿತು.

ಪೆರ್ನಾಜೆ ಪಿ ಯು ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ ಆರ್ ಗೋಪಾಲ ಕೃಷ್ಣರವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕತೆ, ಹಾಡು, ಪ್ರಹಸನ ಎಲ್ಲವನ್ನು ಒಳಗೊಂಡ ಲೋಕವೇ ಸಾಹಿತ್ಯ ಲೋಕ ಎಂದರು. ಮನುಷ್ಯನ ದೈನಂದಿನ ಬದುಕಿನ ಆಗುಹೋಗುಗಳನ್ನು ಹಾಡುಗಳ ಮೂಲಕ ವರ್ಣಿಸಿದ್ದಾರೆ. ಸಂಸ್ಥೆಯ ಆಡಳಿತಾಧಿಕಾರಿಯಾದ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಸಾಹಿತ್ಯ ನಿನಾದದ ಮೂಲ ಉದ್ದೇಶ ಮಕ್ಕಳನ್ನು ಮಾನಸಿಕ ಒತ್ತಡದಿಂದ ಹೊರತರುವುದೇ ಆಗಿದೆ. ಮತ್ತು ಅದನ್ನು ಸದುಪಯೋಗಪಡಿಸುವಂತೆ ಪ್ರೇರೇಪಿಸಿದರು. ವೇದಿಕೆಯಲ್ಲಿ ಟ್ರಸ್ಟಿ ಶ್ರೀಮತಿ ರಶ್ಮಿ ಅಶ್ವಿನ್ ಎಲ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ, ಸಾಹಿತ್ಯ ಸಂಘದ ಸಂಯೋಜಕಿ ಶಿಕ್ಷಕಿ ದೇವಮ್ಮ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರದ್ಧಾ ಕೆ ಡಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗ ನಿರೂಪಿಸಿ, ಸ್ವಾಗತ ಮಹಮ್ಮದ್ ರಾಶಿದ್ ದ್ವಿತೀಯ ಪಿಯುಸಿ ವಿಜ್ಙಾನ ವಿಭಾಗ, ಸಂವಿಧಾನ ಪೀಠಿಕೆ ಶಝಾ ಫಾತಿಮ 10ನೇ ತರಗತಿ, ಧನ್ಯವಾದ ಸಜ 10ನೇ ತರಗತಿ, ಅತಿಥಿಯ ಪರಿಚಯ ಶಂತನುಕೃಷ್ಣ ೯ನೇ ತರಗತಿ, ಪ್ರಾರ್ಥನೆ ದೇಚಮ್ಮ ಮತ್ತು ಬಳಗ ನೆರವೇರಿಸಿದರು.

LEAVE A REPLY

Please enter your comment!
Please enter your name here