





ಪುತ್ತೂರು: ಬೊಳುವಾರು ಪ್ರಗತಿ ಆಸ್ಪತ್ರೆ, ಪ್ರಗತಿ ಪ್ಯಾರ ಮೆಡಿಕಲ್ ಕಾಲೇಜ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನಲ್ಲಿ ವಿಶ್ವ ಪೋಲಿಯೋ ದಿನ ಆಚರಣೆಯ ಅಂಗವಾಗಿ ಪೋಲಿಯೋ ನಿರ್ಮೂಲನೆ ಜಾಗೃತಿ ಕಾರ್ಯಕ್ರಮ ನಡೆಯಿತು.


ರೋಟರಿ ಕ್ಲಬ್ ಪುತ್ತೂರು, ಪುತ್ತೂರು ಈಸ್ಟ್, ಪುತ್ತೂರು ಸಿಟಿ, ಪುತ್ತೂರು ಯುವ, ಪುತ್ತೂರು ಸ್ವರ್ಣ, ಪುತ್ತೂರು ಸೆಂಟ್ರಲ್, ಪುತ್ತೂರು ಎಲೈಟ್, ಪುತ್ತೂರು ಬಿರುಮಲೆ ಹಿಲ್ಸ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಗತಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಶ್ರೀಪತಿ ರಾವ್, ಪ್ರಗತಿ ಶಿಕ್ಷಣ ಸಂಸ್ಥೆಗಳ ಆಡಳಿತಧಿಕಾರಿ ಪ್ರೀತಾ ಹೆಗ್ಡೆ, ಪುತ್ತೂರಿನ ವಿವಿಧ ರೋಟರಿ ಸಂಸ್ಥೆಗಳ ಅಧಕ್ಷರು, ಕಾರ್ಯದಶಿಗಳು ಮತ್ತು ಸದಸ್ಯರು, ಪ್ರಗತಿ ಸಂಸ್ಥೆಯ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡರು.





ಮೌನೇಶ್ ವಿಶ್ವಕರ್ಮ ಮತ್ತು ತಂಡ ಜಾಗೃತಿ ಗೀತೆ ಗಾಯನ ನಡೆಸಿಕೊಟ್ಟರು.









