





ಪುತ್ತೂರು: ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ ಮಾಡಿದ ಮತ್ತೊಂದು ಘಟನೆ ಇದೀಗ ಬೆಳಕಿಗೆ ಬಂದಿದೆ.


ತೆಂಕಿಲ ನಿವಾಸಿ ವಿನೋದ್ ಕೆ ಎಂಬಾತ ಆ.5ರಂದು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ಬಂದು ಸಾಲ ಪಡೆಯಲು ಸರವೊಂದನ್ನು ನೀಡಿದ್ದರು. ಸಂಸ್ಥೆಯ ಚಿನ್ನಪರೀಕ್ಷಕ ಪರೀಕ್ಷಿಸಿ ಚಿನ್ನವೆಂದು ದೃಢಪಡಿಸಿದ ಬಳಿಕ ಸಂಸ್ಥೆಯಿಂದ ವಿನೋದ್ ಅವರಿಗೆ ರೂ.2 ಲಕ್ಷ ಸಾಲ ನೀಡಲಾಗಿತ್ತು. ಆ.6ರಂದು ವಿನೋದ್ ಅವರು ಮತ್ತೆ ಸಂಘಕ್ಕೆ ಬಂದು ನೇಕ್ಲಸ್ ಇರಿಸಿ ರೂ.1.10 ಲಕ್ಷ ಸಾಲ ಪಡೆದರು. ಆ.26ಕ್ಕೆ ಬಂದು ಚೈನ್, ಬ್ರೇಸ್ ಲೈಟ್ ಅಡಮಾನ ಇರಿಸಿ ರೂ.1.10 ಲಕ್ಷವನ್ನು ಸಾಲ ಪಡೆದಿದ್ದರು.ಸೆ.4ಕ್ಕೆ ಬಂದು ರೂ.2 ಲಕ್ಷ ಮತ್ತು ಬಡ್ಡಿ ರೂ.2,140 ಅನ್ನು ಪಾವತಿಸಿ ಆ.5ರಂದು ಅಡವಿಟ್ಟ ಚಿನ್ನವನ್ನು ಬಿಡಿಸಿ ಅದೇ ದಿನ ಮತ್ತೆ ಅದೇ ಚಿನ್ನವನ್ನು ಕೊಟ್ಟು ರೂ.2.10 ಲಕ್ಷ ಸಾಲ ಪಡೆದಿದ್ದರು.





ನಕಲಿ ಚಿನ್ನಾಭರಣವಿಟ್ಟು ವಂಚನೆ ಮಾಡಿರುವ ಕುರಿತು ಅ.17ರ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ನೋಡಿ ಅನುಮಾನಗೊಂಡು, ಸಂಘದಲ್ಲಿ ವಿನೋದ್ ಅಡವಿಟ್ಟಿದ್ದ ಚಿನ್ನವನ್ನು ಬಾಲಾಜಿ ಎಂಟರ್ ಪ್ರೈಸಸ್‌ನಲ್ಲಿ ಪರಿಶೀಲನೆಗೆ ಒಳಪಡಿಸಿದಾಗ, ಶಾಖೆಯಲ್ಲಿ ಅಸಲಿಯೆಂದು ಆಡವಿರಿಸಿದ ಒಟ್ಟು 101.850 ಗ್ರಾಂ ತೂಕದ ಚಿನ್ನ ನಕಲಿ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಘಟನೆ ಕುರಿತು ಶಾಖೆಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಅವರು ನೀಡಿದ ದೂರಿನಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.






