ಪುತ್ತೂರು: 1 ಸಾವಿರ ಮೊತ್ತ ಸಂಗ್ರಹಿಸಿ ಅಕ್ರಮ ಲಕ್ಕಿ ಡ್ರಾ ಸ್ಕೀಮ್- ಪ್ರಕರಣ ದಾಖಲು

0

ಪುತ್ತೂರು: ಕರಪತ್ರಗಳ ಮೂಲಕ ಸುಳ್ಳು ಭರವಸೆ ನೀಡಿ ಅಕ್ರಮವಾಗಿ ಲಕ್ಕಿಸ್ಕೀಮ್ ಮಾಡುತ್ತಿರುವ ಕುರಿತು ಸಾರ್ವಜನಿಕರು ಚರ್ಚಿಸುವುದನ್ನು ಗಮನಿಸಿ ವಿಚಾರಿಸಿ ‘ಬಿಗ್ ಟಿಕೆಟ್ ಲಕ್ಕಿಸ್ಕೀಮ್’ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.


ಅ.25ರಂದು ಪೊಲೀಸರು ರೌಂಡ್ಸ್ ಸಂದರ್ಭ ಸಾರ್ವಜನಿಕರು ಬಿಗ್ ಟಿಕೆಟ್ ಲಕ್ಕಿಸ್ಕೀಮ್ ಕರಪತ್ರಗಳನ್ನು ನೋಡಿ ಚರ್ಚಿಸುತ್ತಿದ್ದರು. ಅದನ್ನು ನಡೆಸುತ್ತಿರುವವರು ಉಕ್ಕಿನಡ್ಕದ ಮೊಹಮ್ಮದ್ ಶಫಿಕ್, ಪುತ್ತೂರಿನ ಶರೀಫ್ ಮತ್ತು ಆಶಿಕ್ ಎಂಬವರು ಎಂದು ಮಾಹಿತಿ ತಿಳಿದು ಅವರನ್ನು ವಿಚಾರಿಸಿದಾಗ ರೂ.1 ಸಾವಿರ ಮೊತ್ತ ಸಂಗ್ರಹಿಸಿ ಅಕ್ರಮ ಲಕ್ಕಿ ಡ್ರಾ ಲಕ್ಕಿಸ್ಕೀಮ್ ನಡೆಸುತ್ತಿರುವ ಕುರಿತು ಮಾಹಿತಿ ಪಡೆಯಲಾಗಿದ್ದು, ಬಿಗ್ ಲಕ್ಕಿಸ್ಕೀಮ್ ನ ಮೊಹಮ್ಮದ್ ಶಫಿಕ್, ಶರೀಫ್ ಮತ್ತು ಆಶಿಕ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here