





ಬಡಗನ್ನೂರು: ತಮಿಳುನಾಡಿನ ಕೊಯಂಬತೂರಿನಲ್ಲಿ ನಡೆದ ಈಶ ಗ್ರಾಮ ಉತ್ಸವ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಪಡುಮಲೆ ಶಾಸ್ತಾರ ತಂಡದ ಸದಸ್ಯರನ್ನು ಬಡಗನ್ನೂರು ಗ್ರಾ.ಪಂ ವತಿಯಿಂದ ಅಭಿನಂದಿಸಲಾಯಿತು.



ಗ್ರಾ. ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ತಂಡದ ಸದಸ್ಯರಾದ ರಮಾಕಾಂತಿ ರೈ ಬಿ, ದೀಕ್ಷಾ ರೈ ಎ, ರೇಖಾ ರೈ ಪಿ ಎಸ್, ಶ್ವೇತಾ ಎಸ್ ರೈ, ಪ್ರಿಯಾ ಬಿ, ಆಶಾಲತಾ ಕೆ, ಹೇಮಾವತಿ ಸಿ ಹೆಚ್, ಸಾಕ್ಷಿ ರೖೆ ರವರನ್ನು ಪೇಟ ಧರಿಸಿ, ಶಾಲು ಹೊದಿಸಿ, ಹಾರ ಫಲ ಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಿದರು.





ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೊಡ್, ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ಸಂತೋಷ ಆಳ್ವ ಗಿರಿಮನೆ ಧರ್ಮೇಂದ್ರ ಕುಲಾಲ್ ಪದಡ್ಕ, ರವಿಚಂದ್ರ ಸಾರೆಪ್ಪಾಡಿ, ಕುಮಾರ ಅಂಬಟೆಮೂಲೆ, ವೆಂಕಟೇಶ್ ಕನ್ನಡ್ಕ, ವಸಂತ ಗೌಡ ಕನ್ನಯ, ಲಿಂಗಪ್ಪ ಗೌಡ ಮೋಡಿಕೆ, ಪದ್ಮನಾಭ ಕನ್ನಡ್ಕ, ಕಲಾವತಿ ಗೌಡ ಷಟ್ಲಡ್ಕ, ಶ್ರೀಮತಿ ಕನ್ನಡ್ಕ, ದಮಯಂತಿ ಕೆಮನಡ್ಕ, ಸುಜಾತ ಮೖೆಂದನಡ್ಕ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮೋಡಿಕೆ, ಸವಿತಾ ನೇರೊಳ್ತಡ್ಡ, ಅಭಿವೃದ್ಧಿ ಅಧಿಕಾರಿ ಬಿ ಕೆ ಸುಬ್ಬಯ್ಯ, ಕಾರ್ಯದರ್ಶಿ ಕೊರಗಪ್ಪ ನಾಯ್ಕ ಹಾಗೂ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಮತ್ತು ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.



