





ಪುತ್ತೂರು: ಅಂಬಿಕಾ ಶಿಕ್ಷಣ ಸಂಸ್ಥೆಯ ರಜತ ವರ್ಷಾಚರಣೆ ಪ್ರಯುಕ್ತ ಬಪ್ಪಳಿಗೆ ಅಂಬಿಕಾ ಕಾಲೇಜಿನ ಶ್ರೀ ಶಂಕರ ಸಭಾಭವನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಅರೇಮ್ಯ- 2025 ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ.



ಭಗವದ್ಗೀತಾ ಪಠಣ -ಮುಕುಂದ (ಪ್ರಥಮ), ಜನಪದ ನೃತ್ಯ- ವೈಷ್ಣವಿ ಮತ್ತು ತಂಡ (ಪ್ರಥಮ),ಪೋಸ್ಟರ್ ಮೇಕಿಂಗ್ – ಅದ್ವಿತ್ ಜಿ ಮತ್ತು ದ್ವಿಜನ್ (ಪ್ರಥಮ), ಭರತನಾಟ್ಯ- ಲಾಸ್ಯ ಎನ್ ವಿ(ದ್ವಿತೀಯ), ವಿಡಿಯೋ ಎಡಿಟಿಂಗ್- ವಿನಿಲ್ ವಿಶ್ವಕರ್ಮ ಮತ್ತು ಮನೀಷ್ (ದ್ವಿತೀಯ) ಸ್ಥಾನವನ್ನು ಪಡೆದುಕೊಂಡಿರುತ್ತಾರೆ.










