ಕೈ ಬರಹದಲ್ಲಿ ಕುರಾನ್ ಬರೆದ ಸಜ್ಲಾ ಬೈತಡ್ಕಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ

0

ಪುತ್ತೂರು: ಪವಿತ್ರ ಕುರಾನ್ ಗ್ರಂಥವನ್ನು ಕೈ ಬರಹದ ಮೂಲಕ ಕಲಂನಿಂದ ಇಂಕ್ ಗೆ ಅದ್ದಿ ಬರೆದು ದಾಖಲೆ ಮಾಡಿದ ಫಾತಿಮಾ ಸಜ್ಲಾ ಬೈತಡ್ಕ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದು ಐಬಿಆರ್ ಅಚೀವರ್ ಪ್ರಶಸ್ತಿ ಪಡೆದಿದ್ದಾರೆ.‌


ಇಂಡಿಯಾ ಬುಕ್ ಆಫ್ ರೆಕಾರ್ಡ್ ಇವರ ಅಸಾಮಾನ್ಯ ಸಾಧನೆಯನ್ನು ಗುರುತಿಸಿ ಪದಕ ಮತ್ತು ಪ್ರಶಸ್ತಿ ನೀಡಿ ಗೌರವಿಸಿದೆ.
604 ಪುಟಗಳಲ್ಲಿ 114 ಖಾಂಡಗಳ ಕುರಾನ್ ಬರಹಕ್ಕೆ ಸುಮಾರು 2416 ತಾಸುಗಳನ್ನು ವ್ಯಯಿಸಲಾಗಿದ್ದು 15 ಬಾಟಲ್ ಇಂಕ್, 152 ಚಾರ್ಟ್ ಪೇಪರ್,102 ಎರೇಸರ್ ಬಳಸಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಇದರ ಲೋಕಾರ್ಪಣೆ ಕಾರ್ಯಕ್ರಮ ಕುಂಬ್ರ ಮರ್ಕಝ್ ಕ್ಯಾಂಪಸ್ ನಲ್ಲಿ ನಡೆದಿದ್ದು ಇದು ವ್ಯಾಪಕ ಪ್ರಚಾರ ಪಡೆದಿತ್ತು.


ವಿಶ್ವದಲ್ಲಿ ಕೈ ಬರಹದಲ್ಲಿ ಕುರಾನ್ ಬರೆದಿದ್ದರೂ ಮಷಿ ಅದ್ದಿ ಕಲಂ ಮೂಲಕ ಕುರಾನ್ ಬರೆದ ಏಕೈಕ ವಿದ್ಯಾರ್ಥಿನಿಯಾಗಿ ಸಜ್ಲಾ ಹೆಸರು ನೋಂದಾಯಿಸಲ್ಪಟ್ಟಿದ್ದು ಏಷ್ಯನ್ ಬುಕ್ ಆಫ್ ರೆಕಾರ್ಡ್, ಲಿಮ್ಕಾ ದಾಖಲೆ, ಗಿನ್ನಿಸ್ ದಾಖಲೆಗಳಿಗೆ ಸೇರ್ಪಡೆಗೊಳಿಸುವ ಪ್ರಯತ್ನ ಪ್ರಗತಿಯಲ್ಲಿದೆ. ಸಜ್ಲಾ ಸಾಧನೆ ದೇಶ ವಿದೇಶಗಳ ಮಧ್ಯಮಗಳಲ್ಲಿ ಪ್ರಸಾರಗೊಂಡಿತ್ತು.
ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು ಇದರ ಸ್ಥಾಪಕ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಬೈತಡ್ಕ ಮತ್ತು ಝಹ್ರಾ ಜಾಸ್ಮಿನ್ ದಂಪತಿಗಳ ಪುತ್ರಿ ಫಾತಿಮಾ ಸಜ್ಲಾ ಅವರು ಕುಂಬ್ರ ಮರ್ಕಝುಲ್ ಹುದಾ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here