





ವ್ಯಕ್ತಿಯನ್ನು ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಯೋಜನೆ ಪಾತ್ರ ಹಿರಿದು: ಶಶಿಧರ ಎಂ


ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪುತ್ತೂರು ತಾಲೂಕಿನ ಬನ್ನೂರು ವಲಯದ ಬೆಳ್ಳಿಪ್ಪಾಡಿ ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬೆಳ್ಳಿಪ್ಪಾಡಿ ಸರಕಾರಿ ಉನ್ನತ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೇಂದ್ರದ ಸದಸ್ಯರಾದ ಯಶೋಧ ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಹಿರಿಯರು ಪ್ರಗತಿಪರ ಕೃಷಿಕರು ಆಗಿರುವಂತಹ ಪದ್ಮನಾಭ ಶೆಟ್ಟಿ ರೆಂಜಾಜೆ ಇವರು ನೆರವೇರಿಸಿ ಗ್ರಾಮಾಭಿರುದ್ಧಿ ಯೋಜನೆಯಿಂದ ಯಾವುದೇ ಕಾರ್ಯಕ್ರಮ ನಡೆದರು ಅಲ್ಲಿ ಶಿಸ್ತು ಕಾಣಬಹುದು, ಶಿಸ್ತಿನ ಬಗ್ಗೆ ಮೊದಲನೆಯದಾಗಿ ತಿಳಿಸಿರುವುದೇ ಯೋಜನೆ. ಪ್ರತಿ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನಡೆಯಬೇಕಾದರೆ ಯೋಜನೆಯ ಪಾತ್ರ ಬಹಳಷ್ಟಿದೆ ಎಂದು ಶುಭ ಹಾರೈಸಿದರು.





ತಾಲೂಕಿನ ಯೋಜನಾಧಿಕಾರಿಗಳಾದ ಶಶಿಧರ್ ಎಂರವರು ಮಾತನಾಡುತ್ತ ನಾವು ಯಾವ ರೀತಿ ಬೆಳೆದು ಬಂದಿದ್ದೇವೆ ಯಾವ ಮಟ್ಟದಲ್ಲಿ ಬಂದು ನಿಂತಿದ್ದೇವೆ ಇದಕ್ಕೆಲ್ಲ ಮೂಲ ಕಾರಣ ಗ್ರಾಮಾಭಿವೃದ್ಧಿ ಯೋಜನೆ. ಜ್ಞಾನ ವಿಕಾಸ ಕಾರ್ಯಕ್ರಮವು ಗ್ರಾಮಾಭಿವೃದ್ಧಿ ಯೋಜನೆಯ ಕಿರೀಟ ಇದ್ದಂತೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಧೈರ್ಯವನ್ನು ತುಂಬಿ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ. ವ್ಯಕ್ತಿಯನ್ನು ಶಕ್ತಿಯಾಗಿ ಪರಿವರ್ತಿಸುವಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮಹತ್ತರ ಪಾತ್ರವನ್ನು ವಹಿಸಿದೆ.ಇನ್ನು ಮುಂದೆಯೂ ಇಂತಹ ಕಾರ್ಯಕ್ರಮಗಳು ಜ್ಞಾನವಿಕಾಸ ಕೇಂದ್ರದಲ್ಲಿ ನಡೆಯಲಿ ಎಂದು ಶುಭ ಹಾರೈಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಆಗಿರುವ ಅರುಣರವರು ಮಾತನಾಡುತ್ತಾ ಮಹಿಳೆ ಸಂಸಾದ ಕಣ್ಣು, ಸಮಾಜಕ್ಕೆ ಶಕ್ತಿ ಹಾಗೂ ವಿಶ್ವದ ಶಕ್ತಿ ಸಮಾಜದ ಮುಖ್ಯ ವಾಹಿನಿಗೆ ಬಂದು ಮಹಿಳೆ ಇಂದು ತನ್ನ ಸ್ಥಾನ ಮಾನವನ್ನು ಪಡೆದುಕೊಂಡಿದ್ದಾಳೆ ಎಂದರೆ ಗ್ರಾಮಾಭಿವೃದ್ಧಿ ಯೋಜನೆಯೇ ಕಾರಣ. ಮಹಿಳೆಯೂ ತಾನು ಮಾಡುವ ಕೆಲಸವನ್ನು ಪ್ರೀತಿಸಿ ಕುಟುಂಬದ ಅಭಿವೃದ್ಧಿ ಯನ್ನು ಕಾಣುತ್ತಾಳೆ. ಈ ಜ್ಞಾನವಿಕಾಸದಿಂದ ಮಹಿಳೆಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತ ಇದ್ದಾರೆ ಈ ಆಸಕ್ತಿ ಮುಂದೆಯೂ ಹೀಗೆ ಇರಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಜ್ಞಾನವಿಕಾಸದ ಸದಸ್ಯರಿಗೆ ಹಲವಾರು ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಕೇಂದ್ರದ ಸದಸ್ಯೆ ಜಲಜಾಕ್ಷಿ ಅನಿಸಿಕೆಯನ್ನು ಹೇಳಿದರು, ಕೇಂದ್ರದ ಸದಸ್ಯರು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಹಸನ ನೀಡಿ ಮನರಂಜಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿ ಬಂಧು ಸ್ವ ಸಹಾಯ ಸಂಘಗಳು ಒಕ್ಕೂಟ ಬನ್ನೂರು ವಲಯದ ವಲಯಾಧ್ಯಕ್ಷರಾದ ಮನೋಹರ ಗೌಡ, ಜನಜಾಗೃತಿ ವೇದಿಕೆ ಯ ವಲಯಾಧ್ಯಕ್ಷರಾದ ರಾಮಣ್ಣ ಗುಂಡೋಲೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ವಾಸುದೇವ ಆಚಾರ್ಯ, ಜ್ಞಾನವಿಕಾಸ ಕೇಂದ್ರದ ಸದಸ್ಯರು ಒಕ್ಕೂಟದ ಸದಸ್ಯರು ಸೇವಾಪ್ರತಿನಿಧಿಗಳು ಮಕ್ಕಳುಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು, ಕೇಂದ್ರದ ಸದಸ್ಯೆ ಭವ್ಯ ಸ್ವಾಗತಿಸಿದರು, ಸದಸ್ಯೆ ಉಷಾ ವಂದಿಸಿದರು.









