





ಪುತ್ತೂರು: ಸಾಹಿತಿ,ನಿವೃತ್ತ ಪ್ರಾಂಶುಪಾಲ ಶ್ರೀ ಬಿ.ವಿ.ಸೂರ್ಯನಾರಾಯಣ ಅವರ ಇತ್ತೀಚಿನ ಕೃತಿ ‘ಮೊಗ್ಗು ಅರಳುವ ಮುನ್ನ’ ಕುರಿತು ಸಂವಾದ ಕಾರ್ಯಕ್ರಮ ಅ.18ರಂದು ಕೊಳ್ತಿಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಪೆರ್ಲಂಪಾಡಿಯ ಚೈತನ್ಯ ಅಭಿವ್ಯಕ್ತಿ ವೇದಿಕೆ ಏರ್ಪಡಿಸಿದದ್ದರು.


ಎಳೆಯ ವಯಸ್ಸಿನ ಮಕ್ಕಳಿಗೆ ಪೋಷಕರೇ ಸ್ವತಃ ಶಿಕ್ಷಕರಾಗಿ ಹೇಗೆ ಅವರ ಭವಿಷ್ಯವನ್ನು ರೂಪಿಸಬೇಕು ಮತ್ತು ಯೋಗ್ಯ ಸಂಸ್ಕಾರ ನೀಡಿ ಅವರ ಗುಣಾತ್ಮಕ ಬೆಳವಣಿಗೆಗೆ ಕಾರಣರಾಗಬೇಕೆಂಬ ವಿಚಾರಗಳನ್ನು ತಮ್ಮ ಕೃತಿಯಲ್ಲಿ ನಿರೂಪಿಸಿದ ಬಗ್ಗೆ ಮೊದಲು ಕೃತಿಕಾರರು ಪ್ರಸ್ತಾಪಿಸಿದರು.ಬಳಿಕ ಸಭೆಯಲ್ಲಿ ಈ ಕುರಿತು ಹಲವು ಬಗೆಯ ಪರಾಮರ್ಶೆ, ಚಿಂತನೆಗಳನ್ನು ನಡೆಸಲಾಯಿತು. 





ಚೈತನ್ಯ ಅಭಿವ್ಯಕ್ತಿ ವೇದಿಕೆಯ ಅಧ್ಯಕ್ಷ ಎಂ.ಗಣೇಶ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿಷ್ಣು ಭಟ್ ಎಕ್ಕಡ್ಕ ಸ್ವಾಗತಿಸಿ,ಕಾರ್ಯದರ್ಶಿ ಎಂ.ತಿಮ್ಮಪ್ಪಯ್ಯ ವಂದಿಸಿದರು.ವೇದಿಕೆಯ ಸದಸ್ಯರು ಮತ್ತು ಹಿತೈಷಿಗಳ ಸಹಕರಿಸಿದರು. ಶಿವರಾಮ ಅಮಳ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 40 ಮಂದಿ ಆಸಕ್ತರು ಭಾಗವಹಿಸಿದ್ದರು.


 
            
