





ಪ್ರ.ಕಾರ್ಯದರ್ಶಿ, ಕೋಶಾಧಿಕಾರಿ ಹುದ್ದೆಗೆ ಅವಿರೋಧ ಆಯ್ಕೆ


ಪುತ್ತೂರು:ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಸಾಲಿನ ಅವಧಿಯ ಆಡಳಿತ ಮಂಡಳಿ ಪದಾಽಕಾರಿಗಳ ಆಯ್ಕೆಗೆ ನ.9ರಂದು ಚುನಾವಣೆ ನಡೆಯಲಿದ್ದು ಸಂಘದ ಒಟ್ಟು 23 ಸ್ಥಾನಗಳಿಗೆ ಪುತ್ತೂರಿನ ಏಳು ಮಂದಿ ಸೇರಿ 34 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.





ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೇಶ್ ಕೆ. ಪೂಜಾರಿ ಹಾಗೂ ಕೋಶಾಧಿಕಾರಿ ಹುದ್ದೆಗೆ ವಿಜಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಅಧ್ಯಕ್ಷ-1 ಹುದ್ದೆ, ಉಪಾಧ್ಯಕ್ಷ-3 ಹುದ್ದೆ,ಕಾರ್ಯದರ್ಶಿ-3, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ-1 ಹುದ್ದೆ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ-15 ಹುದ್ದೆಗಳಿಗೆ ಸ್ಪರ್ಧೆ ಏರ್ಪಟ್ಟಿದ್ದು ಚುನಾವಣೆ ನಡೆಯಲಿದೆ.ನಾಮಪತ್ರ ಹಿಂಪಡೆಯಲು ಅ.30 ಅಂತಿಮ ದಿನವಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ವಾರ್ತಾ ಭಾರತಿಯ ಸಿಟಿ ಚೀಫ್ ಬ್ಯೂರೋ ಪುಷ್ಪರಾಜ್ ಬಿ.ಎನ್ ಹಾಗೂ ವಿಜಯವಾಣಿಯ ಶ್ರವಣ್ ಕುಮಾರ್ ಕೆ, ಉಪಾಧ್ಯಕ್ಷ ಸ್ಥಾನಕ್ಕೆ ವಿಲ್ರೆಡ್ ಡಿ ಸೋಜ, ಮುಹಮ್ಮದ್ ಆರೀಫ್, ಐ.ಬಿ.ಸಂದೀಪ್ ಕುಮಾರ್, ಗಂಗಾಧರ ಕಲ್ಲಪಳ್ಳಿ, ರಾಜೇಶ್ ಶೆಟ್ಟಿ,ಕಾರ್ಯದರ್ಶಿ ಹುದ್ದೆಗೆ ಎ.ಸಿದ್ದಿಕ್ ನೀರಾಜೆ, ರಾಜೇಶ್ ಕುಮಾರ್ ಡಿ., ಸುರೇಶ್ ಡಿ ಪಳ್ಳಿ, ಸತೀಶ್ ಇರಾ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಶ್ರೀನಿವಾಸ ನಾಯಕ್ ಕೆ.,ಮುಹಮ್ಮದ್ ಅನ್ಸಾರ್ ಇನೋಳಿ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಗಳಿಗೆ ಸುದ್ದಿ ಬಿಡುಗಡೆ ಹಿರಿಯ ವರದಿಗಾರ ಶೇಖ್ ಜೈನುದ್ದೀನ್, ಅಶೋಕ್ ಶೆಟ್ಟಿ ಬಿ.ಎನ್., ಸಂದೇಶ್ ಜಾರ, ಪ್ರಕಾಶ್ ಸುವರ್ಣ, ಸಂದೀಪ್ ಕುಮಾರ್ ಎಂ., ಲಕ್ಷ್ಮೀನಾರಾಯಣ ರಾವ್, ಹರೀಶ್ ಮೋಟುಕಾನ, ಶಶಿಧರ ಬಂಗೇರ, ದಿವಾಕರ ಪದ್ಮುಂಜ, ಕಿರಣ್ ಯು.ಸಿರ್ಸಿಕರ್, ಅಭಿಷೇಕ್ ಎಚ್.ಎಸ್, ಜಯಶ್ರೀ, ಮಂಜುನಾಥ ಕೆ.ಪಿ., ಭುವನೇಶ್ವರ ಜಿ., ಸಂದೀಪ್ ವಾಗ್ಲೆ, ಪ್ರವೀಣ್‌ರಾಜ್ ಕೆ.ಎಸ್.,ಹರೀಶ್ ಕೆ.ಆದೂರ್, ಲೋಕೇಶ್ ಸುರತ್ಕಲ್, ಗಿರೀಶ್ ಅಡ್ಪಂಗಾಯ,ಸಂದೀಪ್ ಸಾಲ್ಯಾನ್ ಹಾಗೂ ಆರೀಫ್ ಕಲ್ಕಟ್ಟ ಅಂತಿಮ ಕಣದಲ್ಲಿದ್ದಾರೆ.
ಪುತ್ತೂರಿನ 7 ಮಂದಿ ಕಣದಲ್ಲಿ: 
ಚುನಾವಣೆಯಲ್ಲಿ ಪುತ್ತೂರು,ಕಡಬದ ಏಳು ಮಂದಿ ಕಣದಲ್ಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಪುತ್ತೂರಿನವರಾಗಿರುವ ವಾರ್ತಾಭಾರತಿ ಮಂಗಳೂರು ಸಿಟಿ ಚೀಫ್ ಬ್ಯೂರೋ ವರದಿಗಾರ ಉಪ್ಪಿನಂಗಡಿ ಕೊಲದ ಪುಷ್ಪರಾಜ್ ಬಿ.ಎನ್.,ಪುತ್ತೂರಿನಲ್ಲಿ ವಿಜಯವಾಣಿ ವರದಿಗಾರರಾಗಿದ್ದ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶ್ರವಣ್ ಕುಮಾರ್ ನಾಳ,ಉಪಾಧ್ಯಕ್ಷ ಸ್ಥಾನಕ್ಕೆ ಹೊಸದಿಗಂತ ವರದಿಗಾರ ಐ.ಬಿ.ಸಂದೀಪ್ ಕುಮಾರ್, ಕಾರ್ಯದರ್ಶಿ ಸ್ಥಾನಕ್ಕೆ ಉಪ್ಪಿನಂಗಡಿ ಪ್ರಜಾವಾಣಿ ಹಾಗೂ ವಿಜಯಕರ್ನಾಟಕ ಪತ್ರಿಕೆ ವರದಿಗಾರ ಸಿದ್ದೀಕ್ ನೀರಾಜೆ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ ಪ್ರತಿನಿಧಿ ಪತ್ರಿಕೆಯ ಸ್ಥಾನೀಯ ಸಂಪಾದಕರಾಗಿರುವ ಸುಳ್ಯಪದವು ಇಂದಾಜೆ ನಿವಾಸಿ ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಮಿತಿಗೆ ಸುದ್ದಿ ಬಿಡುಗಡೆ ಹಿರಿಯ ವರದಿಗಾರ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶೇಖ್ ಜೈನುದ್ದೀನ್ ಹಾಗೂ ವಿಜಯವಾಣಿ ಕಡಬ ವರದಿಗಾರ ಪ್ರವೀಣ್‌ರಾಜ್ ಕೆ.ಎಸ್.ಕಣದಲ್ಲಿದ್ದಾರೆ.


 
            
