





ಪುತ್ತೂರು: ತಿಂಗಳಾಡಿ ಸ.ಉ.ಹಿ.ಪ್ರಾ.ಶಾಲೆಗೆ ಕೆದಂಬಾಡಿ ಗ್ರಾಮ ಪಂಚಾಯತ್ ವತಿಯಿಂದ ಬೋರ್‌ವೆಲ್ ಪಂಪ್‌ನ್ನು ಹಸ್ತಾಂತರಿಸಲಾಯಿತು.


ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಮತ್ತು ಸದಸ್ಯ ಮೆಲ್ವಿನ್ ಮೊಂತೆರೋ ಅವರು ಪಂಪ್‌ನ್ನು ಶಾಲೆಗೆ ಹಸ್ತಾಂತರಿಸಿದರು.





ತಿಂಗಳಾಡಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಹಮೀದ್ ತಿಂಗಳಾಡಿ ಮತ್ತು ಶಿಕ್ಷಕ ವೃಂದದವರು ಪಂಪ್ ಸ್ವೀಕರಿಸಿದರು. ನಮ್ಮ ಶಾಲೆಯ ಬೋರ್‌ವಲ್ ಪಂಪ್ ಪದೇ ಪದೇ ಹಾಳಾಗುತ್ತಿದ್ದ ಪರಿಣಾಮ ನೀರಿಗೆ ಸಮಸ್ಯೆ ಆಗುತ್ತಿದ್ದುದನ್ನು ಗ್ರಾ.ಪಂ ಗಮನಕ್ಕೆ ತಂದಾಗ ಕೂಡಲೇ ಸ್ಪಂದಿಸಿದ ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್, ಸದಸ್ಯ ಮೆಲ್ವಿನ್ ಮೊಂತೆರೋ ಹಾಗೂ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಎಸ್‌ಡಿಎಂಸಿ ಅಧ್ಯಕ್ಷ ಹಮೀದ್ ತಿಂಗಳಾಡಿ ತಿಳಿಸಿದರು.


 
            
