ಕರಾಟೆ ಚಾಂಪಿಯನ್‌ಶಿಪ್‌: ಫಿಲೋಮಿನಾ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಏಂಜೆಲ್. ಜೆ ಗೆ ಪ್ರಶಸ್ತಿ

0

ಪುತ್ತೂರು : ಆಲ್ ಇಂಡಿಯಾ ಶಿತೋರ್ಯು  ಕರಾಟೆ – ಡೂ ಯೂನಿಯನ್ ನ ಆಶ್ರಯದಲ್ಲಿ ನ 1 ಮತ್ತು 2 ರಂದು ಚಾಮುಂಡಿ ವಿಹಾರ್ ಸ್ಟೇಡಿಯಂ, ಮೈಸೂರುನಲ್ಲಿ ನಡೆದ 28 ನೇ ಆಲ್ ಇಂಡಿಯ ಶಿತೋರ್ಯು ಕರಾಟೆ – ಡೂ ಚಾಂಪಿಯನ್ ಶಿಪ್ – 2025 ಸ್ಪರ್ಧೆಯಲ್ಲಿ 15 – 17 ವರ್ಷದ  ವೈಯಕ್ತಿಕ ಕಟಾ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಏಂಜೆಲ್ ಜೆ ಅವರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಇವರು ಸಂಪಾಜೆ ನಿವಾಸಿ ಜೋಸೆಫ್ ಮತ್ತು  ವಿಜಯಲಕ್ಷ್ಮಿ ದಂಪತಿಗಳ ಪುತ್ರಿ. ಇವರಿಗೆ ಚಂದ್ರಶೇಖರ್ ಕನಕ ಮಜಲು ತರಬೇತಿ ನೀಡುತ್ತಾರೆ.ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಕಾಲೇಜಿನ  ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here