





ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕರು, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಕಾರ್ಯಕ್ರಮ ಸಂಯೋಜಕರಾಗಿರುವ ನಾರಾಯಣ ಕುಂಬ್ರ ಸಾಹಿತ್ಯದಲ್ಲಿ ಮೂಡಿ ಬಂದಿರುವ ‘ಮೊಳಗಲಿ ಕನ್ನಡದ ಕಹಳೆ’ ದೃಶ್ಯ ಗೀತೆಯನ್ನು ನಂದಗೋಕುಲ ಬಡಾವಣೆ ಗೋಕುಲನಗರ ಮುಕ್ರಂಪಾಡಿ ಇಲ್ಲಿ ಐಎಎಸ್ ಮತ್ತು ಐಪಿಎಸ್ ದರ್ಶನ ಸಂಸ್ಥೆ ಪುತ್ತೂರು ಸ್ಥಾಪಕಾಧ್ಯಕ್ಷರು, ತರಬೇತುದಾರರಾದ ದರ್ಶನ್ ಗರ್ತಿಕೆರೆ ಬಿಡುಗಡೆಗೊಳಿಸಿದರು.


ಕಾರ್ಯಕ್ರಮದಲ್ಲಿ ದ್ವಾರಕಾ ಪ್ರತಿಷ್ಠಾನ ಪುತ್ತೂರು ಇದರ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಪುತ್ತೂರು ಉಮೇಶ್ ನಾಯಕ್, ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಡಾ. ವಿಜಯ ಕುಮಾರ್ ಮೊಳೆಯಾರ್, ಡಾ. ಶ್ರೀಧರ ಹೆಚ್. ಜಿ, ಗಣರಾಜ ಕುಂಬ್ಳೆ, ಅಮೃತಕೃಷ್ಣ, ನಾರಾಯಣ ಕುಂಬ್ರ ಉಪಸ್ಥಿತರಿದ್ದರು.





ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ನಿರ್ಮಾಣದಲ್ಲಿ, ಗಾಯಕ ಮಿಥುನ್ ರಾಜ್ ವಿದ್ಯಾಪುರ ರಾಗ ಸಂಯೋಜಿಸಿ, ಎಂ ಎಸ್ ಸುಕನ್ಯಾ ವಿಟ್ಲ ಹಾಡಿರುವ ಈ ದೃಶ್ಯ ಗೀತೆ ಶ್ರೀರಾಜ್ ಮ್ಯೂಸಿಕ್ ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಂಡಿದೆ. ಎಲ್ಲರೂ ವೀಕ್ಷಿಸಿ ಸಹಕರಿಸಬೇಕಾಗಿ ನಾರಾಯಣ ಕುಂಬ್ರ ವಿನಂತಿಸಿಕೊಂಡಿದ್ದಾರೆ.









