





ಪುತ್ತೂರು: ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಸ್ವರ್ಣ ಪಾದುಕಾ ಸವಾರಿ ಹಿನ್ನೆಲೆಯಲ್ಲಿ ಶಿವಶಂಕರ ಭಟ್ ಬೋನಂತಾಯರವರ ಪರ್ಲಡ್ಕ ಪಾಂಗಳಾಯಿಯ ಮನೆ ‘ಶೃಂಗಾರ’ದಲ್ಲಿ ಸ್ವರ್ಣ ಪಾದುಕೆ ಆಗಮನ, ಪೂರ್ಣಕುಂಭ ಸ್ವಾಗತ ಹಾಗೂ ಧೂಳಿ ಪೂಜೆ ಕಾರ್ಯಕ್ರಮ ನ.1ರಂದು ನಡೆಯಿತು.



ಗೋ ಪೂಜೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ಷಿಪ್ರಾ ಗಾಯತ್ರಿ ಬೋನಂತಾಯರವರಿಂದ ಭಗವದ್ಗೀತೆ ಪಠಣ ನಡೆಯಿತು. ಕ್ಷಿತೀಶ ಶಂಕರ ಬೋನಂತಾಯ ಹಾಗೂ ಕ್ಷಿಪ್ರಾ ಗಾಯತ್ರಿ ಬೋನಂತಾಯ ಅವರಿಂದ ಕ್ರೇಡ್ ಆರ್ಟ್ ಪ್ರದರ್ಶನ ನಡೆಯಿತು. ಬಳಿಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಹಿಮ್ಮೇಳದಲ್ಲಿ ಬಾಲಕೃಷ್ಣ ಹೊಸಮನೆ, ಮೃದಂಗದಲ್ಲಿ ತನ್ಮಯಿ ಉಪ್ಪಂಗಳ, ವೈಯಲಿನ್, ಗರಿಮಾ ಬೋನಂತಾಯ ಹಾಗೂ ಅಣಿಮಾ ಬೋನ೦ತಾಯ ಹಾಡುಗಾರಿಕೆಯಲ್ಲಿ ಸಹಕರಿಸಿದರು.






ನಾರಾಯಣ ಭಟ್ ರವರ ಪುತ್ರಿ ವಿದುಷಿ ಶ್ರೀವಿದ್ಯಾ ಈಶ್ವರಚಂದ್ರರನ್ನು ಸನ್ಮಾನಿಸಲಾಯಿತು. ಶಿವಶಂಕರ ಭಟ್ ಬೋನಂತಾಯ ಮತ್ತು ಮನೆಯವರು ಸ್ವಾಗತಿಸಿ ಸತ್ಕರಿಸಿದರು.








