





ವಿಶ್ವಾಸಾರ್ಹ ಸೇವೆಯಿಂದ ಸಂಸ್ಥೆಯ ಅಭಿವೃದ್ಧಿ-ಅರಿಯಡ್ಕ ಹಾಜಿ


ಪುತ್ತೂರು: ಮಾಸ್ಟರ್ಸ್ ಸರ್ವೀಸ್ ಪಾಯಿಂಟ್ ಇದರ ಮೂರನೇ ಶಾಖೆ ತಿಂಗಳಾಡಿಯಲ್ಲಿ ನ.೭ರಂದು ಶುಭಾರಂಭಗೊಂಡಿತು. ಸರ್ವೀಸ್ ಪಾಯಿಂಟ್ನ್ನು ಉದ್ಘಾಟಿಸಿದ ಒಳಮೊಗ್ರು ಗ್ರಾ.ಪಂ ಮಾಜಿ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ಯಾವುದೇ ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಗ್ರಾಹಕರ ವಿಶ್ವಾಸಗಳಿಸುವುದು ಮುಖ್ಯ, ಮಾಸ್ಟರ್ ಸರ್ವೀಸ್ ಪಾಯಿಂಟ್ ಉತ್ತಮ ಸೇವೆಯ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿದ ಕಾರಣ ಇದೀಗ ಮೂರನೇ ಶಾಖೆಯನ್ನು ಆರಂಭಿಸಿದೆ ಎಂದು ಹೇಳಿದರು. ತಿಂಗಳಾಡಿಯಲ್ಲಿ ವ್ಯಾಪಾರ, ಉದ್ಯಮಗಳು ಹೆಚ್ಚುತ್ತಿರುವುದು ಅಭಿವೃದ್ಧಿಗೆ ಪೂರಕವಾಗಿದೆ, ಮಾಸ್ಟರ್ಸ್ ಸರ್ವೀಸ್ ಪಾಯಿಂಟ್ ಯಶಸ್ವಿಯಾಗಿ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಅವರು ಶುಭ ಹಾರೈಸಿದರು.





ಚಂದನ ಕಾಂಪ್ಲೆಕ್ಸ್ನ ಮಾಲಕ ರಾಮಮೋಹನ್ ಭಟ್, ಹಾಜಿ ಅಲೀ ಮಾಸ್ಟರ್, ಶೇಖರ್ ಮಾಡಾವು, ಪ್ರಜ್ವತ್ ರೈ ತಿಂಗಳಾಡಿ, ಕೆದಂಬಾಡಿ ಗ್ರಾ.ಪಂ ಸದಸ್ಯ ಮೆಲ್ವಿನ್ ಮೊಂತೆರೋ, ಒಳಮೊಗ್ರು ಗ್ರಾ.ಪಂ ಸದಸ್ಯ ಲತೀಫ್ ಟೈಲರ್, ಆದಂ ಝಿಯಾದ್ ಅಡ್ಯನಡ್ಕ, ತಿಂಗಳಾಡಿ ಮಸೀದಿಯ ಮಾಜಿ ಅಧ್ಯಕ್ಷ ಸಿದ್ದೀಕ್ ತಿಂಗಳಾಡಿ, ಅಲೈನ್ ಕನ್ಸ್ಟ್ರಕ್ಷನ್ನ ಹರ್ಷದ್, ಬದ್ರುದ್ದೀನ್ ಹಿರಾ, ಬಶೀರ್ ಬಲ್ಕಾಡ್ ಹಾಗೂ ಮಾಸ್ಟರ್ಸ್ ಸರ್ವೀಸ್ ಪಾಯಿಂಟ್ನ ಮಾಲಕ ರಾಝಿಕ್ ಮಾಸ್ಟರ್ ಅವರ ತಂದೆ ಹಾಜಿ ಅಲಿ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.
ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದ ಮಾಸ್ಟರ್ಸ್ ಸರ್ವೀಸ್ ಪಾಯಿಂಟ್ನ ಮಾಲಕ ರಾಝಿಕ್ ಮಾಸ್ಟರ್ ಮಾತನಾಡಿ ನಮ್ಮಲ್ಲಿ ದ್ವಿಚಕ್ರ ವಾಹನ, ಕಾರು ಹಾಗೂ ಇನ್ನಿತರ ವಾಹನಗಳನ್ನು ಕ್ಲಪ್ತ ಸಮಯದಲ್ಲಿ ಬಾವಿ ನೀರಿನಲ್ಲಿ ವಾಶ್ ಮಾಡಿ ಕೊಡಲಾಗುವುದು ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.










