





ಪುತ್ತೂರು: ಡಿಪಾರ್ಟ್ಮೆಂಟ್ ಆಫ್ ಎಂಪಾಯಿರ್ಮೆಂಟ್ ಆಂಡ್ ಸ್ಪೋರ್ಟ್ಸ್ ಹಾಗೂ ಕರ್ನಾಟಕ ಒಲಂಪಿಕ್ ಅಸೋಶಿಯೇಷನ್ ಇವರ ಸಹಯೋಗದಲ್ಲಿ ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ನ.03 ರಿಂದ ನ.07ರ ತನಕ ನಡೆದ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯ ಕ್ರೀಡಾಪಟುಗಳಾದ ತೃಷಾ ಕೋಡಂದೂರು (ಚಾರ್ವಾಕ ದಿ.ದಾಮೋದರ ಗೌಡ ಮತ್ತು ದೇವಿಕಾ ದಂಪತಿಗಳ ಪುತ್ರಿ ) ಮತ್ತು ಧನ್ಯಶ್ರೀ ಅರ್ಬಿ (ಕುಂತೂರು ಅರ್ಬಿ ಲೋಕೇಶ್ ಗೌಡ ಮತ್ತು ಗೀತಾ ದಂಪತಿಗಳ ಪುತ್ರಿ ) ಇವರು ಭಾಗವಹಿಸಿದ ದ.ಕ ತಂಡ ಫೈನಲ್ ಪಂದ್ಯಾಟದಲ್ಲಿ ಚಿಕ್ಕಮಗಳೂರು ವಿರುದ್ಧ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತದೆ.


ಇವರಿಗೆ ಶಾಲಾ ಆಡಳಿತ ಮಂಡಳಿ ಸಹಕಾರದೊಂದಿಗೆ ಮುಖ್ಯ ಮಾತಾಜಿ ಆಶಾ ಎಸ್.ರೈ, ಮುಖ್ಯ ಶ್ರೀಮಾನ್ ಸತೀಶ್ ಕುಮಾರ್ ಜಿ.ಆರ್ ಮಾರ್ಗದರ್ಶನದೊಂದಿಗೆ ಶಿಕ್ಷಕ ಚಂದ್ರಹಾಸ ಕೆ.ಸಿ, ಮನೋಹರ್, ಯಶಸ್ವೀ ತರಬೇತಿ ನೀಡಿರುತ್ತಾರೆ.















