ಗಾಂಧಿನಗರ ಮಸೀದಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗೋಹತ್ಯೆ ಕಾಯ್ದೆ ಹಾಗೂ ಡ್ರಗ್ಸ್ ಬಗ್ಗೆ ಕಾನೂನು ಜಾಗೃತಿ ಅರಿವು ಕಾರ್ಯಕ್ರಮ

0

ಕಾನೂನು ಅರಿತು ಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನಿರ್ಮಾಣಕ್ಕೆ ಪೊಲೀಸರೊಂದಿಗೆ ಸಹಕರಿಸಿ :ಎಸ್ ಐ ಸಂತೋಷ್

ಪುತ್ತೂರು: ಪೊಲೀಸ್ ಇಲಾಖೆ ವತಿಯಿಂದ ಕಾನೂನಿನ ಅರಿವು ಮೂಡಿಸುವ ಕಾರ್ಯಕ್ರಮ ಸುಳ್ಯ ತಾಲೂಕು ಕೇಂದ್ರದ ಗಾಂಧಿನಗರ ಜುಮ್ಮಾ ಮಸೀದಿಯಲ್ಲಿ ನಡೆಯಿತು.

ಇಲಾಖೆ ವತಿಯಿಂದ ಮಾಹಿತಿ ನೀಡಿದ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಕುಮಾರ್ ಬಿ. ಪಿ. ಮಾತನಾಡಿ, ‘ರಾಜ್ಯದಲ್ಲಿ ಜ್ಯಾರಿಯಲ್ಲಿರುವ ಗೋಹತ್ಯೆ ನಿಷೇದ ಕಾನೂನಿನ ಬಗ್ಗೆ ವಿವರವಾಗಿ ತಿಳಿಸಿದರು. ಯುವ ಜನರಲ್ಲಿ ಹೆಚ್ಚಾಗುತ್ತಿರುವ ಮಾದಕ ವ್ಯಸನಗಳ ಬಗ್ಗೆ ಕಾನೂನು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್, ಸುಳ್ಯ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ, ನಗರ ಪಂಚಾಯತ್ ಸದಸ್ಯ ಕೆ. ಎಸ್. ಉಮ್ಮರ್, ಅನ್ಸಾರಿಯ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರದ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಇಲಾಖೆಯ ಪ್ರಕಾಶ್ ಹೆಡ್ ಕಾನ್ಸ್ ಟೇಬಲ್ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here