





ಪುತ್ತೂರು:ತಮ್ಮ ಮಕ್ಕಳನ್ನು ಮಾರಣಾoತಿಕ ಡ್ರಗ್ಸ್ ಪಿಡುಗಿನಿಂದ ರಕ್ಷಿಸಿ “EMPOWER FUTURE ” ಕಾರ್ಯಕ್ರಮ ನವೆಂಬರ್ 15 ಮಂಗಳೂರಿನ ಪುರಭವನದಲ್ಲಿ ನಡೆಯಲಿದ್ದು,ಸುಳ್ಯದಲ್ಲಿ ಕರ ಪತ್ರ ಬಿಡುಗಡೆ, ಆಹ್ವಾನ ಪತ್ರ ಹಂಚಿಕೆ ಕಾರ್ಯ ನಡೆಯಿತು. ಅಂತಾರಾಷ್ಟ್ರೀಯ ಖ್ಯಾತಿಯ ಪ್ರಭಾಷಣಕಾರ ಸಿಂಸಾರುಲ್ ಹಕ್ ಹುದವಿ, ಭಾಗಿಯಗಲಿದ್ದಾರೆ.


ಕರ ಪತ್ರ ಬಿಡುಗಡೆಯನ್ನು ಸುಳ್ಯ ಪೊಲೀಸ್ ಠಾಣೆ ಪೊಲೀಸ್ ಉಪ ನೀರಿಕ್ಷಕರಾದ ಸಂತೋಷ್ ಕುಮಾರ್ ಬಿ. ಪಿ. ಬಿಡುಗಡೆಗೊಳಿಸಿದರು.
ಇಕ್ಬಾಲ್ ಬಾಳಿಲ ರವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಪೀಕರ್ ಯು. ಟಿ. ಖಾದರ್ ಭಾಗವಹಿಸಲಿದ್ದಾರೆ ಎಂದು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ತಿಳಿಸಿದರು.





ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯ ಕೆ. ಎಸ್. ಉಮ್ಮರ್, ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆಎಂಎಸ್ ಮಹಮ್ಮದ್, ಅನ್ಸಾರಿಯಾ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಅಬೂಬಕ್ಕರ್ ಅಡ್ವೋಕೇಟ್ ಮೊದಲಾದವರು ಉಪಸ್ಥಿತರಿದ್ದರು.










