ರಾಷ್ಟ್ರೀಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸ್ವೀಕರಿಸಿದ ವಿಂಧ್ಯಾ.ಎಸ್.ರೈ

0

ಪುತ್ತೂರು: ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ ) ಕರ್ನಾಟಕ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇದರ ಸಹಯೋಗದಲ್ಲಿ ಮೈಸೂರು ಜಿಲ್ಲಾ ಪರಿಷತ್ತಿನ ಕನ್ನಡ ಭವನದಲ್ಲಿ ಕಾವ್ಯಶ್ರೀ ಸಾಹಿತ್ಯ ಸಮ್ಮೇಳನವು ಜರುಗಿತು.

ಈ ಕಾರ್ಯಕ್ರಮದಲ್ಲಿ ಕರ್ನಾಟಕದಾದ್ಯಂತ ಆಯ್ದ ಪ್ರತಿಭಾನ್ವಿತರಿಗೆ ಹಲವಾರು ಗಣ್ಯರ ಸಮ್ಮುಖದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪ್ರಧಾನಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಹುಮುಖ ಪ್ರತಿಭಾ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ವಿಂಧ್ಯಾ.ಎಸ್.ರೈ ಅವರು ರಾಷ್ಟ್ರೀಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಪಾತ್ರರಾದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಸೇವೆ ಸಲ್ಲಿಸುತ್ತಿರುವ ಇವರು ಲೇಖಕಿ, ಕವಯತ್ರಿ, ಸಂಘಟಕಿ,ನಿರೂಪಕಿ, ಸಂಪನ್ಮೂಲ ವ್ಯಕ್ತಿಯಾಗಿ ತನ್ನ ಕಾರ್ಯವೈಖರಿಯಿಂದಲೇ ಗುರುತರವಾಗಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ. ಕಡೇಶಿವಾಲಯ ಕುರುಂಬ್ಲಾಜೆ ಗುತ್ತು ಸುಂದರ ರೈಯವರ ಧರ್ಮಪತ್ನಿಯಾಗಿರುವ ಇವರು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ದ.ಕನ್ನಡ ಜಿಲ್ಲಾಧ್ಯಕ್ಷೆ.

LEAVE A REPLY

Please enter your comment!
Please enter your name here