ಕನ್ನಡ ಗ್ರಾಮೋತ್ಸವ ಹಬ್ಬ- ನರಿಮೊಗರು ಶಾಲೆ ಸಮಗ್ರ ಚಾಂಪಿಯನ್

0

ಪುತ್ತೂರು: ನರಿಮೊಗರು ದಿ. ಪ್ರಕಾಶ್ ಪುರುಷರ ಕಟ್ಟೆರವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕನ್ನಡ ಗ್ರಾಮೋತ್ಸವ ಹಬ್ಬದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ನರಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ಬಹುಮಾನಗಳನ್ನು ಪಡೆದುಕೊಂಡು ಚಾಂಪಿಯನ್ ಆಗಿದೆ. ವೇಷ ಭೂಷಣ ಸ್ಪರ್ಧೆಯಲ್ಲಿ ಪ್ರಣವ್ ಜಿ. ಮತ್ತು ಅಂಕಿತ ಪ್ರಥಮ, ನಾಟಕ ಅಭಿನಯ ಪ್ರಥಮ, ಕನ್ನಡ ಗೀತ ಗಾಯನ ಪ್ರಥಮ  ಹಾಗೂ ಅದ್ಭುತ ನಿರೂಪಣೆಗಾಗಿ ವಿಶೇಷ ನಗದು ಪುರಸ್ಕಾರವನ್ನು ಆಶ್ಲೇಷ್ ಮಿತಡ್ಕ ಇವರು ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯಗುರು ಶ್ರೀಲತಾ ರಾಜೇಶ್ ರೈ ತಿಳಿಸಿರುತ್ತಾರೆ.

ಉತ್ತಮ ನಿರೂಪಣೆಗೆ ಆಶ್ಲೇಷ್ ಮಿತ್ತಡ್ಕರವರಿಗೆ ನಗದು
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿರುವ ಶಾಲಾ ತಂಡದಲ್ಲಿ ಉತ್ತಮವಾಗಿ ನಿರೂಪಣೆಗೈದ ಆಶ್ಲೇಷ್ ಮಿತ್ತಡ್ಕ ರವರು ನಗದು ಪುರಸ್ಕಾರಕ್ಕೆ ಭಾಜನರಾದರು.

LEAVE A REPLY

Please enter your comment!
Please enter your name here