





ಅಧ್ಯಕ್ಷ: ಲಕ್ಷ್ಮೀ ಪ್ರಸಾದ್ ಬೆಟ್ಟ, ಪ್ರ. ಕಾರ್ಯದರ್ಶಿ: ಜಯಂತ್ ಉರ್ಲಾಂಡಿ, ಸಂದೀಪ್ ನೆಲ್ಲಿಕಟ್ಟೆ
ಪುತ್ತೂರು: ಪುತ್ತೂರು ತಾಲೂಕು ಗಾಣಿಗ ಯಾನೆ ಸಪಲಿಗರ ಸಂಘದ ಸಭೆಯು ನ.9ರಂದು ಬೆಳಿಗ್ಗೆ ಕಲ್ಲೇಗ ಭಾರತ್ ಮಾತಾ ಸಮುದಾಯ ಸಭಾಭವನದಲ್ಲಿ ನಡೆಯಿತು.
ಪುತ್ತೂರು ತಾಲೂಕು ಗಾಣಿಗ ಯಾನೆ ಸಫಲಿಗ ಸಂಘದ ಅಧ್ಯಕ್ಷ ಹರಿರಾಮಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಬಳಿಕ ವಲಯ ಮಟ್ಟದ ಸಮಿತಿ ರಚನೆಯಾಯಿತು. ಪುತ್ತೂರು ಶ್ರೀಲಕ್ಷ್ಮೀ ದೇವಿ ಬೆಟ್ಟ ಮಹಾಲಕ್ಷೀ ಕ್ಷೇತ್ರದ ಲಕ್ಷ್ಮೀ ಪ್ರಸಾದ್ ಬೆಟ್ಟ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಗಳಾಗಿ ಜಯಂತ್ ಉರ್ಲಾಂಡಿ, ಸಂದೀಪ್ ನೆಲ್ಲಿಕಟ್ಟೆ, ಉಪಾಧ್ಯಕ್ಷರಾಗಿ ರಾಜೇಶ್, ವಿನಯ್ ಕಲ್ಲೇಗ, ಪ್ರದೀಪ್ ಬೊಳುವಾರು, ಜತೆ ಕಾರ್ಯದರ್ಶಿಯಾಗಿ ಶಶಿ ಸಪಲ್ಯ ಕಲ್ಲೇಗ, ವಿನೋದ ಕುಮಾರ್, ಕೋಶಾಧಿಕಾರಿಯಾಗಿ ಕಾರ್ತಿಕ್ ಕಬಕ ಆಯ್ಕೆಯಾದರು. ಸದಸ್ಯರಾಗಿ ಜಯಂತ್ ಕಲ್ಲೇಗ, ಆನಂದ ಕೊಡಿಪಾಡಿ, ಅಭಿಷೇಕ್, ಮನೀತ್, ಅಶ್ವನ್, ವಸಂತ ಕಲ್ಲೇಗ, ಧನಂಜಯ, ಸುನೀಲ್, ಚಂದ್ರಕಾಂತ್ ಉರ್ಲಾಂಡಿ, ಮಧುರಾಜ್, ಮಹೇಶ್ ಕಲ್ಲೇಗ, ಪ್ರವೀಣ್ ಗಾಣದಕೋಟ್ಯ, ಧನುಸ್, ಧನು, ಮಂಜುಳಾ ಕೃಷ್ಣ ಪ್ರಸಾದ್ ಬೆಟ್ಟ, ಜಯಲಕ್ಷ್ಮೀ ನೆಲ್ಲಿಕಟ್ಟೆ, ಮಮತಾ ಸಂದೇಶ್ ಕಲ್ಲೇಗ ಆಯ್ಕೆಯಾದರು. ಸಭೆಯಲ್ಲಿ ತಾಲೂಕು ಸಂಘದ ಉಪಾಧ್ಯಕ್ಷ ಮೋಹನ್ ಕಲ್ಲೇಗ, ಸದಸ್ಯರಾದ ಗೋವರ್ಧನ್ ಕಲ್ಲೇಗ, ನವೀನ್ ಕಲ್ಲೇಗ, ಮಹಿಳಾ ಸದಸ್ಯೆ ಶಶಿಕಲಾ ಭಾಸ್ಕರ್ ಉಪ್ಪಿನಂಗಡಿ, ಉಳಿದಂತೆ ಲಕ್ಷ್ಮಿಕಾಂತ್, ಗಂಗಾಧರ್, ಭಾಸ್ಕರ್, ನಾರಾಯಣ, ಶೀನ ಸಪಲ್ಯ, ಶಶಿಧರ್, ನವೀನ್ ಚಂದ್ರ, ಸಂದೇಶ್, ಸಮನ್ವಿ, ಹರೀಶ್, ರಮೇಶ್ ಪದೆಂಬಾರು ಉಪಸ್ಥಿತರಿದ್ದರು.











