





ಸರಕಾರಿ ಶಾಲೆಗಳು ಜೀವನ ರೂಪಿಸುವ ದೇಗುಲ – ಭಾಸ್ಕರ ಕೋಡಿಂಬಾಳ


ಪುತ್ತೂರು: ಸರಕಾರಿ ಶಾಲೆಗಳು ಜೀವನ ರೂಪಿಸುವ ದೇಗುಲವಾಗಿದೆ. ಪ್ರಾಥಮಿಕ ಶಿಕ್ಷಣ ಮುಗಿದು ವರ್ಗಾವಣೆ ಪತ್ರ ಪಡೆದು ಮೇಲ್ಪಂಕ್ತಿಗೆ ಹೋದರೂ ನಾವು ಕಲಿತ ನಮ್ಮೂರ ಶಾಲೆಯನ್ನು ಮರೆಯಲಾಗುವುದಿಲ್ಲ. ಚಿನ್ನಕ್ಕಾದರೂ ಬೆಲೆ ಕಟ್ಟ ಬಹುದು ಆದರೆ ನಾವು ಕಲಿತ ಶಾಲೆಗೆ ಬೆಲೆ ಕಟ್ಟಲಾಗದು.ಅದು ಅಮೂಲ್ಯವಾದುದು ಎಂದು ಹಿರಿಯ ನ್ಯಾಯವಾದಿ ನೋಟರಿ ಭಾಸ್ಕರ ಕೋಡಿಂಬಾಳ ನುಡಿದರು.





ಅವರು ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ಆಯೋಜಿಸಲಾದ ಪಿಎಂಶ್ರೀ ಸಡಗರ ಹಿರಿಯ ವಿದ್ಯಾರ್ಥಿಗಳ ಸಮ್ಮೀಲನದ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಎಂಬ ವಿಚಾರ ಸಂಕೀರ್ಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ಗುಣಮಟ್ಟದ ಶಿಕ್ಷಣ ಪಡೆಯುವುದು ಇಂದಿನ ಅಗತ್ಯ ಅದು ವೀರಮಂಗಲದಲ್ಲಿ ದೊರಕಿರುವುದು ಈ ಊರಿನ ಮಕ್ಕಳ ಭಾಗ್ಯ ಎಂದರು ಸಂಸ್ಥೆಯನ್ನು ರಾಷ್ಟ್ರ ಮಟ್ಟದವರೆಗೆ ದಾಟಿಸಿದ ಮುಖ್ಯಗುರುಗಳ ಶಿಕ್ಷಕರ ಮತ್ತು ಎಸ್ ಡಿ ಎಂ ಸಿಯವರ ಕಾರ್ಯಕ್ಷಮತೆ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು .
ಹಿರಿಯ ವಿದ್ಯಾರ್ಥಿಗಳ ಸಮ್ಮೀಲನ ಕಾರ್ಯಕ್ರಮವನ್ನು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಸನ್ನ ಕುಮಾರ್ ಇವರು ನೆರವೇರಿಸಿದರು. ವೇದಿಕೆಯಲ್ಲಿ ಪಲ್ಲತ್ತಾರು ಶಾಲೆಯ ಮುಖ್ಯಶಿಕ್ಷಕ ಸೀತಾರಾಮ ಕೆ.ಜಿ , ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹರ್ಷ ಗುತ್ತು, ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ಉಪಸ್ಥಿತರಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ವೀರಮಂಗಲ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ ವೀರಮಂಗಲ ವಂದಿಸಿದರು. ಹಿರಿಯ ವಿದ್ಯಾರ್ಥಿ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು. ಆಟೋಟದಲ್ಲಿ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಶಿಕ್ಷಕ ವೃಂದ, ಪೋಷಕರು,ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಮಕ್ಕರ್ ತೆಲಿಕೆದ ಗಮ್ಮತ್ ಸಾಯಿ ದೀಕ್ಷಿತ್ ಇವರ ನಿರ್ದೇಶನದಲ್ಲಿ ನಡೆಯಿತು









