





ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಪುತ್ತೂರು ತಾಲೂಕಿನ ಅರಿಯಡ್ಕ ವಲಯದ ಕರ್ನೂರು ಕಾರ್ಯಕ್ಷೇತ್ರದಲ್ಲಿ ದಾರಿದೀಪ ಜ್ಞಾನವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭ ಕರ್ನೂರು ಶಾಲೆಯಲ್ಲಿ ನಡೆಯಿತು.



ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯ ಸದಾಶಿವ ರೈ ಉದ್ಘಾಟಿಸಿ, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಹಮ್ಮಿಕೊಂಡ ಜ್ಞಾನ ವಿಕಾಸ ಕಾರ್ಯಕ್ರಮ ಸದುಪಯೋಗವನ್ನು ಎಲ್ಲರೂ ಪಡೆಯುವಂತೆ ಹಾಗೂ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ನಮ್ಮ ಮಕ್ಕಳಿಗೆ ಮನ ಮುಟ್ಟುವಂತೆ ತಿಳಿಸಿ ಬೆಳೆಸಬೇಕೆಂಬ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು.






ವಲಯದ ಮೇಲ್ವಿಚಾರಕರಾದ ಹರೀಶ್ ಜ್ಞಾನ ವಿಕಾಸ ಕಾರ್ಯಕ್ರಮದ ಹಿನ್ನೆಲೆಯ ಬಗ್ಗೆ ಮಾತನಾಡುತ್ತಾ ಕೇಂದ್ರದಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಉತ್ತಮ ಮಾಹಿತಿಗಳು ತರಬೇತಿಗಳು ಸಿಗುತ್ತಿದ್ದು, ಅವಕಾಶವನ್ನು ಬಾಚಿಕೊಂಡು ಕಾರ್ಯಕ್ರಮದ ಸದುಪಯೋಗವನ್ನು ಪಡೆಯುವಂತೆ ಹಾಗೂ ಸಮಯ ಪಾಲನೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅರಿಯಡ್ಕ ವಲಯದ ವಲಯಾಧ್ಯಕ್ಷರಾಗಿರುವ ವಿಕ್ರಂ ರೈ ಸಾಂತ್ಯ, ಅರಿಯಡ್ಕ ವಲಯದ ವಲಯಾಧ್ಯಕ್ಷರಾಗಿರುವ ದಿನೇಶ್ ರೈ ಕುತ್ಯಾಳ, ಕರ್ನೂರ್ ಒಕ್ಕೂಟದ ಅಧ್ಯಕ್ಷರಾಗಿರುವ ಆಶಾ, ಒಕ್ಕೂಟದ ಉಪಾಧ್ಯಕ್ಷರಾಗಿರುವ ಸುಬ್ಬಣ್ಣ ಕಲ್ಲಾಜೆ, ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಯೋಜಕಿ ಉಷಾ ಸ್ವಾಗತಿಸಿದರು. ಕೇಂದ್ರದ ಸದಸ್ಯೆ ನೇತ್ರ ಧನ್ಯವಾದ ಮಾಡಿದರು.










