





ಪುತ್ತೂರು: ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋಗೆ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ರಚನೆಗೆ ನ.23ರಂದು ಚುನಾವಣೆ ನಡೆಯಲಿದ್ದು ಒಟ್ಟು 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.


ಕರ್ನಾಟಕ ರಾಜ್ಯದ 10 ಮತ್ತು ಕೇರಳದಿಂದ 9 ಸೇರಿದಂತೆ ಒಟ್ಟು 19 ಸ್ಥಾನಗಳಿಗೆ ನಿರ್ದೇಶಕರ ಆಯ್ಕೆಯಾಗಬೇಕಿದೆ.19 ಸ್ಥಾನಗಳ ಪೈಕಿ 16 ಸ್ಥಾನಗಳು ಸಾಮಾನ್ಯ ಮೀಸಲು ಮತ್ತು ಎರಡು ಸ್ಥಾನ ಮಹಿಳಾ ಮೀಸಲಾಗಿದ್ದು ಒಂದು ಸ್ಥಾನವನ್ನು ಪ.ಜಾತಿ ಯಾ ಪಂಗಡಕ್ಕೆ ಮೀಸಲಿರಿಸಲಾಗಿದೆ.ಸಾಮಾನ್ಯ 16 ಸ್ಥಾನಗಳಲ್ಲಿ ಎ ಮತ್ತು ಬಿ ದರ್ಜೆಗೆ 4 ಹಾಗೂ ಸಿ ದರ್ಜೆಗೆ 12 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.





ಸಿ ಕ್ಲಾಸ್-29, ಎ,ಬಿ.ಕ್ಲಾಸ್-6 ನಾಮಪತ್ರ:
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನ.8ರಂದು ಕೊನೆಗೊಂಡಿದ್ದು 19 ಸ್ಥಾನಗಳಿಗೆ ಒಟ್ಟು 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಸಿ ಕ್ಲಾಸ್‌ನಿಂದ 29 ಹಾಗೂ ಎ.,ಬಿ.ಕ್ಲಾಸ್‌ನಿಂದ 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಸಿ.ಕ್ಲಾಸ್ ಸಾಮಾನ್ಯ ಮೀಸಲು ವಿಭಾಗದಲ್ಲಿ ಕರ್ನಾಟಕದಿಂದ ರಾಮಪ್ರತೀಕ್ ಕೆ.,ಎಂ.ಜಿ.ಸತ್ಯನಾರಾಯಣ ಸುಳ್ಯ,ದಯಾನಂದ ಹೆಗ್ಡೆ,ಎಂ.ಮಹೇಶ್ ಚೌಟ,ಪುರುಷೋತ್ತಮ ಭಟ್ ಎಂ.,ಎಸ್.ಆರ್.ಸತೀಶ್ಚಂದ್ರ,ಮುರಳೀಕೃಷ್ಣ ಕೆ.ಎನ್.,ವಿಷ್ಣುನಾರಾಯಣ ಭಟ್,ಎ.ವಿ.ತೀರ್ಥರಾಮ,ಗಣಪತಿ ಸರ್ವೇಶ್ವರ ಹೆಗ್ಡೆ,ಮಹೇಶ್ ಕುಮಾರ್(ಮಹೇಶ್ ಪುಚ್ಚಪ್ಪಾಡಿ),ತಿಮ್ಮಪ್ಪ ಗೌಡ,ಜನಾರ್ದನ ಭಟ್ ಎ.,ರಾಘವ ಎ.,ವೇಣುಗೋಪಾಲ್,ಎಸ್‌ಸಿ,ಎಸ್‌ಟಿ ಮೀಸಲು ವಿಭಾಗದಿಂದ ಗಣೇಶ್,ಮಹಿಳಾ ಮೀಸಲು ಸ್ಥಾನದಿಂದ ಮಾಲಿನಿಪ್ರಸಾದ್ ಸುಳ್ಯ,ಕಮಲಾ ಭಟ್ ನಾಮಪತ್ರ ಸಲ್ಲಿಸಿದ್ದಾರೆ.
ಕೇರಳ ರಾಜ್ಯದಿಂದ ಸಿ ಕ್ಲಾಸ್ ಸಾಮಾನ್ಯ ಮೀಸಲು ವಿಭಾಗದಿಂದ ಕೆ.ಸತೀಶ್ಚಂದ್ರ ಭಂಡಾರಿ,ಸದಾನಂದ ಶೆಟ್ಟಿ.,ರಾಮಕೃಷ್ಣ ಸಿ.ಎಂ.,ವಿವೇಕಾನಂದ ಗೌಡ ಪಿ., ಕೆ.ಸತ್ಯನಾರಾಯಣಪ್ರಸಾದ್.,ರಾಧಾಕೃಷ್ಣನ್ ಕೆ., ಕರುಣಾಕರನ್ ನಂಬಿಯಾರ್ ಕೆ.,ಗಣೇಶ್ ಕುಮಾರ್ ಎ.,ಶಶಿಭೂಷಣ, ಮಹಿಳಾ ಮೀಸಲು ಸ್ಥಾನದಿಂದ ಸೌಮ್ಯ, ರವಿಕಲಾ ಶೆಟ್ಟಿಯವರು ನಾಮಪತ್ರ ಸಲ್ಲಿಸಿದ್ದಾರೆ.
ಎ ಮತ್ತು ಬಿ ಕ್ಲಾಸ್‌ನಿಂದ 6 ನಾಮಪತ್ರ:
ಎ ಮತ್ತು ಬಿ ತರಗತಿಯಿಂದ 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಕರ್ನಾಟಕ ರಾಜ್ಯದಿಂದ ರಾಘವೇಂದ್ರ ಹೆಚ್.ಎಂ.,ವಿಶ್ವನಾಥ ಈಶ್ವರ್ ಹೆಗ್ಡೆ,ತೀರ್ಥಾನಂದ ಡಿ.,ಮಂಜುನಾಥ್ ಚಂದ್ರಶೇಖರ್ ಹೆಗ್ಡೆ ಮತ್ತು ಕೇರಳ ರಾಜ್ಯದಿಂದ ವೆಂಕಟ್ರಮಣ ಭಟ್ ವೈ ಮತ್ತು ಪದ್ಮನಾಭ ಪಟ್ಟಾಜೆ ನಾಮಪತ್ರ ಸಲ್ಲಿಸಿದ್ದಾರೆ.
ಕರ್ನಾಟಕದಿಂದ ನಾಮಪತ್ರ ಸಲ್ಲಿಸಿರುವವರಲ್ಲಿ ಎಸ್.ಆರ್.ಸತೀಶ್ಚಂದ್ರ, ಮುರಳೀಕೃಷ್ಣ ಕೆ.ಎನ್.,ಎಂ.ಮಹೇಶ್ ಚೌಟ,ಮಾಲಿನಿ ಪ್ರಸಾದ್, ಕಮಲಾ ಭಟ್,ಎ.ವಿ.ತೀರ್ಥರಾಮ ಮತ್ತು ತೀರ್ಥಾನಂದ ಡಿ.ರವರು ಸಹಕಾರ ಭಾರತಿ ಅಭ್ಯರ್ಥಿಗಳು ಎಂದು ಮಾಹಿತಿ ಲಭಿಸಿದೆ.
ಈ ಪೈಕಿ ಎಸ್.ಆರ್.ಸತೀಶ್ಚಂದ್ರ ಅವರು ಈ ಹಿಂದೆ ಕ್ಯಾಂಪ್ಕೋ ಅಧ್ಯಕ್ಷರಾಗಿ ಆಡಳಿತ ನಡೆಸಿದವರು.ಪ್ರಸ್ತುತ ಅವರು ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮುರಳೀಕೃಷ್ಣ ಕೆ.ಎನ್.ಅವರು ವೃತ್ತಿಯಲ್ಲಿ ವಕೀಲರಾಗಿದ್ದು ಹಲವು ವರ್ಷಗಳಿಂದ ಬಿಜೆಪಿ, ಸಂಘ ಪರಿವಾರದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿರುವವರು.ಪ್ರಸ್ತುತ ವಿವೇಕಾನಂದ ಪದವಿ ಕಾಲೇಜು ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.ಕಮಲಾ ಭಟ್ ಅವರು ರಾಷ್ಟ್ರೀಯ ಸೇವಿಕಾ ಸಮಿತಿ ನಾಯಕಿ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ,ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರ ಪತ್ನಿ. ತೀರ್ಥಾನಂದ ಡಿ.ಅವರು ಪ್ರಸ್ತುತ ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದು, ಈ ಹಿಂದೆ ಪುತ್ತೂರು ಎಪಿಎಂಸಿ ನಿರ್ದೇಶಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಎ.ವಿ. ತೀರ್ಥರಾಮರವರು ಈ ಹಿಂದೆ ಮೀನುಗಾರಿಕಾ ನಿಗಮದ ಅಧ್ಯಕ್ಷರಾಗಿ ಕಾರ‍್ಯನಿರ್ವಹಿಸಿದ್ದರು. ಅಡಿಕೆ ಬೆಳೆಗಾರರ ಪ್ರತಿನಿಧಿಯಾಗಿ ತಾನು ಸ್ಪರ್ಧಿಸುತ್ತಿರುವುದಾಗಿ ಹೇಳಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಕುಮಾರ್(ಮಹೇಶ್ ಪುಚ್ಚಪ್ಪಾಡಿ)ಅವರು ಈ ಹಿಂದೆ ಪತ್ರಕರ್ತರಾಗಿ ಕೆಲಸ ಮಾಡಿದವರು.ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.ಪ್ರಸ್ತುತ ಪ್ರಗತಿಪರ ಕೃಷಿಕರಾಗಿದ್ದಾರೆ. ಇವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
5667 ಮತದಾರರು:
ಕ್ಯಾಂಪ್ಕೋ ಲಕ್ಷಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದರೂ ಒಟ್ಟು 5667 ಮಂದಿಗೆ ಮಾತ್ರ ಮತದಾನಕ್ಕೆ ಅವಕಾಶವಿದೆ. ಸಿ ಕ್ಲಾಸ್‌ನಿಂದ 5576 ಹಾಗೂ ಎ ಮತ್ತು ಬಿ ಕ್ಲಾಸ್‌ನಿಂದ 91 ಮಂದಿ ಮತದಾರರು ಮತದಾನಕ್ಕೆ ಅವಕಾಶ ಪಡೆದುಕೊಂಡಿದ್ದಾರೆ.
ಇಂದು ನಾಮಪತ್ರ ಪರಿಶೀಲನೆ:
ನ.10ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ನಾಮಪತ್ರ ಹಿಂತೆಗೆತಕ್ಕೆ ನ.11 ಕೊನೆಯ ದಿನವಾಗಿದ್ದು ಅದೇ ದಿನ ಸಂಜೆ 5 ಗಂಟೆಗೆ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ.ನ.23ರಂದು ಮಂಗಳೂರು ಶಾರದಾ ವಿದ್ಯಾಲಯದಲ್ಲಿ ಬೆಳಗ್ಗೆ ಗಂಟೆ 8ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ.ನ.25ರಂದು ಕ್ಯಾಂಪ್ಕೋದ ಮಂಗಳೂರು ಪ್ರಧಾನ ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.ನ.28ರಂದು ನೂತನ ನಿರ್ದೇಶಕರ ಘೋಷಣೆ ನಡೆಯಲಿದೆ.










