ಗಾಂಧಿನಗರ ಮಸೀದಿಗೆ ಜಿಲ್ಲಾ ವಕ್ಫ್ ಅಧಿಕಾರಿ ಭೇಟಿ – ಅನುದಾನ ಸದ್ಬಳಕೆಗೆ ಮೆಚ್ಚುಗೆ

0

ಪುತ್ತೂರು: ದಕ್ಷಿಣ ಜಿಲ್ಲಾ ವಕ್ಫ್ ಅಧಿಕಾರಿಯಾದ ಅಬೂಬಕ್ಕರ್, ವಕ್ಫ್ ಆಡಿಟರ್ ಅನ್ವರ್ ಮುಸ್ತಫ ಬೈರಿಕಟ್ಟೆ,ಕಾಮಗಾರಿ ತಾಂತ್ರಿಕ ಪರಿಶೀಲನೆ ಇಂಜಿನಿಯರ್ ಅಬ್ದುಲ್ ಲತೀಫ್ ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ಗೆ ಭೇಟಿ ನೀಡಿದರು.


ಖಬರ್ ಸ್ಥಾನ ಆವರಣ ನಿರ್ಮಿಸಲು ವಕ್ಫ್ ನಿಂದ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪೂರ್ಣಗೊಂಡ ಬಗ್ಗೆ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.ಈ ಸಂದರ್ಭದಲ್ಲಿ ಎಂಜೆಎಂ ಆಡಳಿತ ಮಂಡಳಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.


ಈ ಸಂದರ್ಭದಲ್ಲಿ ಎಂಜೆಎಂ ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜ ಕೊಚ್ಚಿ, ಕಾರ್ಯದರ್ಶಿ ಹಾಜಿ ಐ ಇಸ್ಮಾಯಿಲ್, ನಿರ್ದೇಶಕರುಗಳಾದ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ, ಕೆ. ಎಸ್ ಉಮ್ಮರ್, ಹಾಜಿ ಕೆ. ಎಂ. ಮುಹಿಯ್ಯದ್ದಿನ್ ಫ್ಯಾನ್ಸಿ, ಯಾಕೂಬ್ ಎಸ್ ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here