ರೋಟರಿ ಸೆಂಟ್ರಲ್, ಸ್ಟಾರ್ ಆಪ್ಟಿಕಲ್ಸ್ ನಿಂದ ಕೊಂಬೆಟ್ಟು ಪ್ರೌಢಶಾಲೆ ನೇತ್ರ ತಪಾಸಣಾ ಶಿಬಿರ

0

600 ವಿದ್ಯಾರ್ಥಿಗಳ ಉಚಿತ ನೇತ್ರ ತಪಾಸಣೆ

ಪುತ್ತೂರು: ರೋಟರಿ ಕ್ಲಬ್  ಪುತ್ತೂರು ಸೆಂಟ್ರಲ್ ಮತ್ತು ಸ್ಟಾರ್ ಆಪ್ಟಿಕಲ್ಸ್ ಪುತ್ತೂರು ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು, ಕೊಂಬೆಟ್ಟು  ಇದರ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರ ಜರಗಿತು.

ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷರಾದ ಸುರೇಶ್ ರೈ  ಪಡ್ಡಮ್ ಬೈಲು  ದೀಪ ಬೆಳಗಿಸಿ ಉದ್ಘಾಟಿಸಿದರು. ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷರಾದ ಚಂದ್ರಹಾಸ ರೈ ಬಿ.ರವರು ನೇತ್ರ ತಪಾಸಣಾ ಶಿಬಿರದ ಉದ್ದೇಶದ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು ಮತ್ತು ಸಂರಕ್ಷಣೆ ಕುರಿತಾಗಿ ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ಅವರು ಮಾಹಿತಿ ನೀಡಿದರು. ಉಪ ಪ್ರಾಂಶುಪಾಲರಾದ ವಸಂತ ಮೂಲ್ಯರವರು ರೋಟರಿಯವರು ಹಮ್ಮಿಕೊಂಡ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಮತ್ತು ಸಂತಸ ವ್ಯಕ್ತಪಡಿಸಿದರು.

 ರೋಟರಿ ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್ ಮಹಮ್ಮದ್ ರಫೀಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಕಾರ್ಯದರ್ಶಿ  ಜಯಪ್ರಕಾಶ್ ಎ. ಎಲ್, ಸ್ಟಾರ್ ಆಪ್ಟಿಕಲ್ಸ್ ನ ತಬ್ಸೀರ್, ರೋಟರಿ ಸೆಂಟ್ರಲ್ ಸದಸ್ಯ ಪದ್ಮನಾಭ ಶೆಟ್ಟಿ, ಜಯಪ್ರಕಾಶ್ ಅಮೈ ಮತ್ತು  ಜಗನ್ನಾಥ ಅರಿಯಡ್ಕ  ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಸಹ ಶಿಕ್ಷಕರಾದ ಜಗನ್ನಾಥ ಅರಿಯಡ್ಕ ಸ್ವಾಗತಿಸಿದರು. ಶಿಕ್ಷಕಿ ಯುಜಿನ ಪಿ ವಂದಿಸಿದರು. ಶಿಕ್ಷಕಿ ರೆನಿಟಾ ಸುಷ್ಮಾ ಡಿಸೋಜ .ಕಾರ್ಯಕ್ರಮ ನಿರೂಪಿಸಿದರು. ಸುಮಾರು 600 ಮಂದಿ ವಿದ್ಯಾರ್ಥಿಗಳ ನೇತ್ರ ತಪಾಸಣೆ ಉಚಿತವಾಗಿ ಮಾಡಲಾಯಿತು.

LEAVE A REPLY

Please enter your comment!
Please enter your name here