





ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ವಾಮದಪದವು ಇಲ್ಲಿನ ಬುರೂಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.12ರಂದು ಸ್ಕೌಟ್ಸ್ ಮತ್ತು ಗೈಡ್, ಕಬ್ ಮತ್ತು ಬುಲ್ ಬುಲ್ ಪ್ರವೇಶ ಮುಗಿಸಿದ ಮಕ್ಕಳ ದೀಕ್ಷಾ ಸಮಾರಂಭ ನಡೆಯಿತು.


ಸ್ಕೌಟ್ಸ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ವಾಮದಪದವು ಅಧ್ಯಕ್ಷ ಆನಂದ ಆಚಾರ್ಯ, ಕಾರ್ಯದರ್ಶಿ ಸುಕೇಶ್ ಹಾಗೂ A.D.C ಜನಾಬ್ ಶೇಖ್ ರಹಮತುಲ್ಲಾ ಇವರ ನೇತೃತ್ವದಲ್ಲಿ ಮಕ್ಕಳ ದೀಕ್ಷಾ ಸಮಾರಂಭ ನಡೆಸಲಾಯಿತು.






ಶಾಲಾ ಗೈಡ್ ಕ್ಯಾಪ್ಟನ್, ಸ್ಕೌಟ್ ಮಾಸ್ಟರ್, ಫ್ಲಾಕ್ ಲೀಡರ್ಸ್ ಮತ್ತು ಕಬ್ ಮಾಸ್ಟರ್ ಮಕ್ಕಳಿಗೆ ಸ್ಕಾರ್ಫ್ ಧರಿಸಿ, ಪ್ರವೇಶ ಬ್ಯಾಡ್ಜ್ ಕೊಟ್ಟು ಮಕ್ಕಳ ದೀಕ್ಷಾ ಸಮಾರಂಭ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಸಿ ಸಾಲ್ಯಾನ್ ಸ್ವಾಗತಿಸಿ, ಎಲ್ಸಿ ವಿ. ಕೆ. ಕಾರ್ಯಕ್ರಮವನ್ನು ನಿರೂಪಿಸಿದರು. ಕಬ್ ಬುಲ್ ಬುಲ್, ಸ್ಕೌಟ್ ಗೈಡ್ ಮಕ್ಕಳೆಲ್ಲರೂ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.










