ಸಂಟ್ಯಾರು: ಕೂರೇಲು ಶ್ರೀ ಕ್ಷೇತ್ರ ಶ್ರೀ ಮಲರಾಯ ದೈವಸ್ಥಾನದಲ್ಲಿ ನವದಶ ನೇಮೋತ್ಸವ ಸಂಭ್ರಮ

0

ಶ್ರೀ ಮಲರಾಯ, ಬಂಟ ಮಹಿಷಂತಾಯ, ಪರಿವಾರ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ

ಪುತ್ತೂರು: ತುಳುನಾಡಿನ ಅತ್ಯಂತ ಕಾರಣಿಕತೆಯ ದೈವಸ್ಥಾನಗಳಲ್ಲಿ ಒಂದಾಗಿರುವ ಆರ್ಯಾಪು ಗ್ರಾಮದ ಶ್ರೀ ಕ್ಷೇತ್ರ ಕೂರೇಲು ಶ್ರೀ ಮಲರಾಯ ದೈವಸ್ಥಾನದಲ್ಲಿ ಧರ್ಮದೈವ ಶ್ರೀ ಮಲರಾಯ, ಮಲರಾಯ ಬಂಟ ಮಹಿಶಂತಾಯ ಹಾಗೂ ಪರಿವಾರ ದೈವಗಳ 19 ನೇ ವರ್ಷದ ನೇಮೋತ್ಸವವು ನ.11 ಮತ್ತು 12 ರಂದು ವಿಜೃಂಭಣೆಯಿಂದ ಜರಗಿತು.

ಚಿತ್ರ: ನವೀನ್ ರೈ ಪಂಜಳ

ವಿಶೇಷವಾಗಿ ಈ ವರ್ಷ ದೈವಸ್ಥಾನದ ಕಾರಣಿಕ ಶಕ್ತಿಗಳಾದ ಶ್ರೀ ಮಲರಾಯ, ಮಲರಾಯ ಬಂಟ ಮಹಿಶಂತಾಯ ಹಾಗೂ ಪರಿವಾರ ದೈವಗಳಿಗೂ ನೇಮೋತ್ಸವ ನಡೆದಿದೆ. ಎರಡು ದಿನಗಳ ಕಾಲ ನಡೆದ ನೇಮೋತ್ಸವದಲ್ಲಿ ನೂರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆಯೂ ನಡೆದಿದೆ. ಶ್ರೀ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಸಂಜೀವ ಪೂಜಾರಿ ಕೂರೇಲುರವರ ನೇತೃತ್ವದಲ್ಲಿ ಕೂರೇಲು ತರವಾಡು ಕುಟುಂಬದ ಸರ್ವರ ಸಹಕಾರದೊಂದಿಗೆ ಊರಪರವೂರ ಭಕ್ತಾಧಿಗಳ ಸೇರುವಿಕೆಯೊಂದಿಗೆ ನೇಮೋತ್ಸವ ಬಹಳ ವಿಜೃಂಭಣೆಯಿಂದ ಜರಗಿತು.


ಶ್ರೀ ದೈವಗಳ ನೇಮೋತ್ಸವ ಸಂಭ್ರಮ ನ.11 ರಂದು ಸಂಜೆ ದೈವಗಳ ಭಂಡಾರ ಇಳಿದು ರಾತ್ರಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು ಬಳಿಕ ಕಳಲ್ತಾ ಗುಳಿಗ ನೇಮೋತ್ಸವ (ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಪ್ರಾರ್ಥನೆ-ಬಡಿಸುವುದು) ನಡೆದು ಬಳಿಕ ಶ್ರೀ ಮಲರಾಯ ಮತ್ತು ಶ್ರೀ ಮಲರಾಯ ಬಂಟ ಮಹಿಶಾಂತಾಯ ದೈವಗಳ ನೇಮೋತ್ಸವ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು.

ನ.12 ರಂದು ಸಂಜೆ ಕೊರಗಜ್ಜ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತಿ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಶ್ರೀ ಕೊರಗಜ್ಜ ದೈವದ ನೇಮ ಜರಗಿತು ಬಳಿಕ ಕೊರತಿ ದೈವದ ನೇಮ ಬಳಿಕ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಭಕ್ತಾಧಿಗಳಿಗೆ ಪ್ರಸಾದ ನೀಡಿ ಸತ್ಕರಿಸಿದರು. ಸರಸ್ವತಿ ಸಂಜೀವ ಪೂಜಾರಿ, ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಹರ್ಷಿತ್ ಕುಮಾರ್ ಕೂರೇಲು ಉಪಸ್ಥಿತರಿದ್ದರು.

ಇಷ್ಟಾರ್ಥ ಸಿದ್ಧಿದಾಯಕ ಶ್ರೀ ದೈವಗಳು
ಕೂರೇಲು ದೈವಸ್ಥಾನದಲ್ಲಿ ನೆಲೆಯಾಗಿರುವ ದೈವಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಾರಣಿಕ ಶಕ್ತಿಗಳಾಗಿವೆ. ಇಲ್ಲಿ ಬಂದು ಭಕ್ತಿಯಿಂದ ಕೈಮುಗಿದು ತಮ್ಮ ಹರಕೆ, ಬಯಕೆಗಳನ್ನು ಹೇಳಿಕೊಂಡರೆ ಅದು ಪ್ರಾಪ್ತಿಯಾಗುತ್ತದೆ. ಇದಕ್ಕೆ ಬಹಳಷ್ಟು ನಿದರ್ಶನಗಳನ್ನು ಕಾಣಬಹುದಾಗಿದ್ದು ಪ್ರತಿ ಸಂಕ್ರಮಣ ದಿವಸ ಇಲ್ಲಿಗೆ ಬರುವ ಭಕ್ತರ ಸಂಕ್ರಮಣ ಸೇವೆಗಳೇ ಸಾಕ್ಷಿಗಳಾಗಿವೆ.ನೆಲ,ಜಲ,ಅಲಫಲ ಸೇರಿದಂತೆ ಭಕ್ತರ ಇಷ್ಟಾರ್ಥ ಸಿದ್ದಿದಾಯಕನಾಗಿ ಶ್ರೀ ಮಲರಾಯ ಇಲ್ಲಿ ನೆಲೆಸಿದ್ದಾನೆ.

ನವದಶ ನೇಮೋತ್ಸವ ಸಂಭ್ರಮ
ಶ್ರೀ ಕ್ಷೇತ್ರ ಕೂರೇಲು ಶ್ರೀ ಮಲರಾಯ ದೈವಸ್ಥಾನದಲ್ಲಿ ಕಳೆದ ವರ್ಷ ಸುಮಾರು 22 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳೊಂದಿಗೆ 2024 ಸೆ.12 ರಂದು ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬಹಳ ಅದ್ದೂರಿಯಿಂದ ನಡೆದು ಅಷ್ಠದಶ ನೇಮೋತ್ಸವವು ಕೂಡ ಬಹಳ ವಿಜೃಂಭಣೆಯಿಂದ ಜರಗಿದೆ. ಈ ವರ್ಷ 19 ನೇ ವರ್ಷದ ನವದಶ ನೇಮೋತ್ಸವ ಬಹಳ ಅದ್ದೂರಿಯಾಗಿ ಎರಡು ದಿನ ನಡೆಯಿತು.


‘ ಶ್ರೀ ಕ್ಷೇತ್ರ ಕೂರೇಲು ಶ್ರೀ ಮಲರಾಯ ದೈವಸ್ಥಾದಲ್ಲಿ ಈ ವರ್ಷ ಧರ್ಮದೈವ ಮಲರಾಯ ದೈವ ಸೇರಿದಂತೆ ಪರಿವಾರ ದೈವಗಳಿಗೆ 19 ನೇ ವರ್ಷದ ನವದಶ ನೇಮೋತ್ಸವ ಸಂಭ್ರಮ ಜರಗಿದೆ. ನೇಮೋತ್ಸವಕ್ಕೆ ಆಗಮಿಸಿ ಶ್ರೀ ದೈವಗಳ ಪ್ರಸಾದ ಸ್ವೀಕರಿಸಿದ ಸಮಸ್ತ ಭಕ್ತಾಧಿಗಳಿಗೆ ಮತ್ತು ಸರ್ವರಿಗೂ ಶ್ರೀ ದೈವಗಳು ಒಳ್ಳೆಯದನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.’
ಕೆ.ಸಂಜೀವ ಪೂಜಾರಿ ಕೂರೇಲು, ಆಡಳಿತ ಮೊಕ್ತೇಸರರು, ಶ್ರೀ ಮಲರಾಯ ದೈವಸ್ಥಾನ, ಶ್ರೀ ಕ್ಷೇತ್ರ ಕೂರೇಲು

LEAVE A REPLY

Please enter your comment!
Please enter your name here