





ಪುತ್ತೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.9ರಂದು ಪುತ್ತೂರು ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆಯಿತು. ನವೋದಯ ಪ್ರೌಢ ಶಾಲೆ ಬೆಟ್ಟಂಪಾಡಿಯ 8ನೇ ತರಗತಿಯ ವಿದ್ಯಾರ್ಥಿನಿ ದೀಶಾ ಭಾಗವಹಿಸಿ, 500₹ ನಗದು ಪುರಸ್ಕಾರಗಳೊಂದಿಗೆ ಪ್ರಶಸ್ತಿ ಪತ್ರವನ್ನು ಪಡೆದರು. ಶಾಲಾ ಮುಖ್ಯ ಗುರುಗಳಾದ ಪುಷ್ಪಾವತಿ ಎಸ್ ಮಾರ್ಗದರ್ಶನ ಹಾಗೂ ಶಿಕ್ಷಕಿ ಸುಮಂಗಲಾ ಕೆ ಇವರಿಗೆ ಸಹಕಾರವನ್ನು ನೀಡಿದರು.












