ಬೊಬ್ಬೆಕೇರಿ ಶಾಲೆಯಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಶಿಬಿರ

0

ಗ್ರಾಮೀಣ ಪ್ರದೇಶದ ಜನರಿಗೆ ಒದಗಿಸುವ ಸೇವೆ ಶ್ಲಾಘನೀಯ- ಆನಂದ ಗೌಡ

ಕಾಣಿಯೂರು: ಆಧಾರ್‌ ನೋಂದಣಿ ಮತ್ತು ಪರಿಷ್ಕರಣ ಶಿಬಿರವನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸಿರುವುದು ಬಹಳ ಸಂತೋಷದ ವಿಷಯ. ಇಂತಹ ಸೇವೆಗಳು ಜನರ ಬಾಗಿಲಿಗೆ ಬಂದು ತಲುಪುವುದು ಒಂದು ಮಹತ್ವದ ಹೆಜ್ಜೆ. ಆಧಾರ್‌ ಕಾರ್ಡ್‌ ಇಂದು ಪ್ರತಿಯೊಬ್ಬರಿಗೂ ಅಗತ್ಯ, ಬ್ಯಾಂಕ್‌ ವ್ಯವಹಾರ, ಸರಕಾರಿ ಯೋಜನೆಗಳು, ವಿದ್ಯಾರ್ಥಿ ವೇತನ, ಪಿಂಚಣಿ, ಎಲ್ಲ ಕಡೆ ಆಧಾರ್ ಕಾರ್ಡ್ ಅವಶ್ಯ ದಾಖಲೆ ಎಂದು ಪುತ್ತೂರು ಅಂಚೆ ಉಪವಿಭಾಗ ಅಂಚೆ ಮೇಲ್ವಿಚಾರಕರಾದ ಆನಂದ ಗೌಡ ಹೇಳಿದರು.

ಅವರು ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ಉಪವಿಭಾಗ ಇದರ ಸಹಯೋಗದೊಂದಿಗೆ ನ 14,15ರಂದು ನಡೆದ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಮತ್ತು ಅಂಚೆ ಇಲಾಖೆಯ ವಿವಿಧ ಸವಲತ್ತುಗಳ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯೆ ಸುನಂದಾ ಅಬ್ಬಡ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಬ್ಬೆಕೇರಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಸುನೀತಾ ಗಣೇಶ್ ವಹಿಸಿದ್ದರು. ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ, ಶಾಲಾ ಎಸ್ ಡಿ ಎಂ ಸಿಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಕಾರ್ಯದರ್ಶಿ ಅಶ್ವಿನ್ ಕರಿಮಜಲು, ಕೋಶಾಧಿಕಾರಿ ಸುಕುಮಾರ್ ಕಲ್ಪಡ ಉಪಸ್ಥಿತರಿದ್ದರು. ಗೀತಾ, ಶೃತಿ, ಅಶ್ವಿನ್ ಕರಿಮಜಲು, ಸುಧಾಕರ್ ಕಾಣಿಯೂರು, ಮಹೇಶ್ ಪೈಕ, ಛಾಯಾ, ಶೋಭಾ ಉಪ್ಪಡ್ಕ ಅತಿಥಿಗಳನ್ನು ಗೌರವಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಶಾಲಾ ಮುಖ್ಯಗುರು ಶಶಿಕಲಾ ಸ್ವಾಗತಿಸಿ, ಶಿಕ್ಷಕಿ ಶೋಭಿತಾ ವಂದಿಸಿದರು. ಶಿಕ್ಷಕ ಜನಾರ್ದನ ಹೇಮಳ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಶಶಿಕಲಾ, ಜನಾರ್ದನ ಹೇಮಳ, ಗೀತಾ ಕುಮಾರಿ, ಶೋಭಿತಾ, ಸುರೇಖಾ, ಶೃತಿ, ದಿವ್ಯಾ, ಜಯಲತಾ, ಸುಶ್ಮಿತಾ ಸಹಕರಿಸಿದರು.

2 ದಿನ ನಡೆದ ಶಿಬಿರ
ಬೊಬ್ಬೆಕೇರಿ ಶಾಲೆಯಲ್ಲಿ ನಡೆದ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಶಿಬಿರವು ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆದಿದ್ದು, ಹಲವಾರು ಮಂದಿ ಇದರ ಸದುಪಯೋಗ ಪಡೆದುಕೊಂಡರು.

LEAVE A REPLY

Please enter your comment!
Please enter your name here