





ಪುತ್ತೂರು: ಸ.ಹಿ.ಪ್ರಾ ಶಾಲೆ, ನೆಕ್ಕಿಲಾಡಿ ಇಲ್ಲಿನ ಶಾಲಾ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ, ಪೋಷಕರ ಮಹಾಸಭೆ ಹಾಗೂ ಪ್ರಿಂಟರ್ ಕೊಡುಗೆ ಹಸ್ತಾಂತರ ಕಾರ್ಯಕ್ರಮವು ನಡೆಯಿತು.


ಸಭಾ ಕಾರ್ಯಕ್ರಮವನ್ನು ನೆಕ್ಕಿಲಾಡಿ ಗ್ರಾಮ ಪಂಚಾಯಿತ್ ನ ಉಪಾಧ್ಯಕ್ಷ ಹರೀಶ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು. ಶಾಲಾ ಮುಖ್ಯಗುರು ಕಾವೇರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.






ಈ ಸಂದರ್ಭದಲ್ಲಿ ಭಾರತೀಯ ಭೂಸೇನೆಯ ನಿವೃತ್ತ ಸೇನಾನಿ ಜಯಕುಮಾರ್ ಪೂಜಾರಿ ಶಾಲೆಗೆ ಕೊಡುಗೆಯಾಗಿ ನೀಡಿದ ಪ್ರಿಂಟರ್ ಅನ್ನು ಶಾಲಾ ಮುಖ್ಯ ಗುರುಗಳು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಿಗೆ ಹಸ್ತಾಂತರ ಮಾಡಿದರು. ಬಳಿಕ ಜಯಕುಮಾರ ಪೂಜಾರಿ ಅವರು ಸರ್ವಧರ್ಮ ಸಹ ಬಾಳ್ವೆಯ ಸಮಾಜ ಕಟ್ಟುವಲ್ಲಿ ಸಮುದಾಯದ ಪಾತ್ರದ ಕುರಿತು ಮಾತನಾಡುತ್ತ ದೇಶಭಕ್ತಿಯ ಜಾಗೃತಿಯನ್ನು ಮೂಡಿಸುವ ಜೊತೆಗೆ ಮಕ್ಕಳ ಭವಿಷ್ಯಕ್ಕೆ ಶುಭ ಹಾರೈಸಿದರು. ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಿದ ಜಯಕುಮಾರ್ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸರಕಾರದ ಸುತ್ತೋಲೆಯಂತೆ ಪೋಷಕ ಶಿಕ್ಷಕರ ಸಂವಾದವನ್ನು ನಡೆಸಲಾಯಿತು. ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಶುಭಹಾರೈಸಿದರು. ವೇದಿಕೆಯಲ್ಲಿ ಗಣ್ಯರಾದ ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷಜಾನ್ ಕೆನೋಟ್ , ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜುಬೇರ್, ಭೂ ನ್ಯಾಯ ಮಂಡಳಿಯ ಸದಸ್ಯ ಯುನಿಕ್ ರೆಹಮಾನ್ ಹಾಗೂ ಶಾಲೆಯ ನಿವೃತ್ತ ಮುಖ್ಯ ಗುರು ರುಕ್ಮಿಣಿ ಉಪಸ್ಥಿತರಿದ್ದು ,ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶಾಲಾ ಮಕ್ಕಳು ಪ್ರಾರ್ಥಿಸಿದರು. ಹಿರಿಯ ಶಿಕ್ಷಕಿ ಪದ್ಮಾ ಧನ್ಯವಾದಗೈದರು. ಗೌರವ ಶಿಕ್ಷಕಿ ಪೂರ್ಣಿಮಾ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪೋಷಕರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.










