





ನೆಲ್ಯಾಡಿ: ಇಲ್ಲಿನ ಕೊಲ್ಯೊಟ್ಟು ಅಂಗನವಾಡಿ ಕೇಂದ್ರದಲ್ಲಿ ನ.14ರಂದು ಮಕ್ಕಳ ದಿನಾಚರಣೆ ಆಚರಿಸಲಾಯಿತು.


ಪುಟಾಣಿ ಅದ್ವಿತಾಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾಅಂಚನ್, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಪೂರ್ವವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಕೇಶವ, ಸ್ತ್ರಿಶಕ್ತಿ ಗೊಂಚಲು ಸಮಿತಿ ಅಧ್ಯಕ್ಷೆ ಗೀತಾ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಶುಭಹಾರೈಸಿದರು.
ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಲಾಯಿತು.





ಕಾಮಧೇನು ಮಹಿಳಾ ಸಹಕಾರಿ ಸಂಘ ಹಾಗೂ ಮಕ್ಕಳ ಪೋಷಕರು ಮಕ್ಕಳಿಗೆ ಬಹುಮಾನ ಹಾಗೂ ಉಪಾಹಾರ ನೀಡಿ ಸಹಕರಿಸಿದರು. ಬಾಲವಿಕಾಸ ಸಮಿತಿ, ಸ್ತ್ರಿಶಕ್ತಿ ಸಂಘ, ಮಕ್ಕಳ ಪೋಷಕರು, ಪೂರ್ವವಿದ್ಯಾರ್ಥಿಗಳು, ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸೌಜನ್ಯ ಸ್ತ್ರಿಶಕ್ತಿ ಸಂಘದ ಪ್ರತಿಭಾತುಕರಾಮ ಸ್ವಾಗತಿಸಿ, ಅಂಗನವಾಡಿ ಸಹಾಯಕಿ ಸುಜಾತ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಚಂಪಾವತಿ ನಿರೂಪಿಸಿದರು.










