





ಪುತ್ತೂರು: ಸುಮಾರು 30 ವರ್ಷಗಳಿಂದ ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ,ನಂತರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಶ್ರೀಧರ ನಾಯ್ಕ್ ಬಿ. ಇವರು ನವೆಂಬರ್ 16ರಂದು ನಿಧನರಾಗಿದ್ದಾರೆ. ಇವರ ಆತ್ಮಕ್ಕೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲು ಸಂತಾಪ ಸೂಚಕ ಸಭೆಯನ್ನು ತೆಂಕಿಲದ ನರೇಂದ್ರ ಪ.ಪೂ. ಕಾಲೇಜಿನಲ್ಲಿ ನಡೆಸಲಾಯಿತು.


ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಉಮೇಶ್ ನಾಯಕ್ ರವರು ಮಾತನಾಡುತ್ತಾ, ನಮ್ಮ ಸಂಸ್ಥೆಗಳಿಗೆ ಡಾ. ಶ್ರೀಧರ ನಾಯ್ಕ್ ಬಿ. ಅವರ ಕೊಡುಗೆ ಸ್ಮರಣೀಯ. ಅವರ ಸರಳತೆ, ಉನ್ನತ ಆದರ್ಶಗಳು, ಪರೋಪಕಾರಿ ಉತ್ಸಾಹ, ಸೇವಾ ಕಾಳಜಿ, ಉದ್ಯಮಶೀಲ ಚಾಣಾಕ್ಷತೆ ನಮ್ಮ ಸಂಸ್ಥೆಗಳಿಗೆ ಮಾರ್ಗದರ್ಶಿ ಚೇತನವಾಗಿ ಮತ್ತು ಯುವ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿ ಮುಂದುವರಿಯುತ್ತದೆ. ಎಂದು ಹೇಳಿದರು.





ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕರು,ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು, ಡಾ. ಶ್ರೀಧರ ನಾಯ್ಕ್ ಬಿ. ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಅಗಲಿದ ಆತ್ಮಕ್ಕೆ ಗೌರವ ಸೂಚಕವಾಗಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಿದರು.










