





ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾಗೇಶ ತಂತ್ರಿವರ್ಯರ ನೇತೃತ್ವದಲ್ಲಿ ನ.25-26 ರಂದು ನಡೆಯುವ ವಿಜ್ರಂಭಣೆಯ ಪಂಚಮಿ ಉತ್ಸವ, ಆಶ್ಲೇಷ ಬಲಿ, ನಾಗತಂಬಿಲ ಹಾಗೂ ಷಷ್ಠಿ ಮಹೋತ್ಸವದ ಪ್ರಯುಕ್ತ ಗೊನೆ ಕಡಿಯುವ ಮುಹೂರ್ತ ಕಾರ್ಯಕ್ರಮವು ನ.19 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.



ತಂತ್ರಿವರ್ಯರಾದ ಬ್ರಹ್ಮಶ್ರೀ ನಾಗೇಶ್ ತಂತ್ರಿಗಳ ತೋಟದಲ್ಲಿ ಹಿರಿಯರಾದ ಪವಿತ್ರಪಾಣಿ ಸದಾಶಿವ ಒಡಂಬಡಿತ್ತಾಯರವರು ಬಾಳೆಗೊನೆಯನ್ನು ಕಡಿಯುವ ಮೂಲಕ ಗೊನೆ ಮುಹೂರ್ತವನ್ನು ನೆರವೇರಿಸಿದರು. ಕ್ಷೇತ್ರದ ಅರ್ಚಕರಾದ ವೆಂಕಟೇಶ್ ಭಟ್ ಹಾಗೂ ರಮೇಶ್ ಭಟ್ ರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.






ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಸದಸ್ಯರಾದ ಮಹೇಶ್ ಬಿ.ಕಾವೇರಿಕಟ್ಟೆ, ಸೂರಪ್ಪ ಗೌಡ ಸಂಜಯನಗರ, ರಕ್ಷಿತ್ ನಾಯೈಕ್ ದರ್ಬೆ, ಲಲಿತ ಕೆ.ಕೆಮ್ಮಿಂಜೆ, ರೇಖಾ ಯಶೋಧರ ಮರೀಲು, ಚಂದ್ರಶೇಖರ ಕೆ. ಕಲ್ಲಗುಡ್ಡೆ, ವಸಂತ ನಾಯ್ಕ ಬೆದ್ರಾಳ ಹಾಗೂ ಚಿತ್ತರಂಜನ್ ಗೌಡ, ಗಣೇಶ್ ಗೌಡ ನೈತ್ತಾಡಿ, ಲೋಕೇಶ್ ಗೌಡ, ರಾಧಾಕೃಷ್ಣ ಗೌಡ ಮುಕ್ರಂಪಾಡಿ, ಯೋಗೀಶ್ ದೇವಾಡಿಗ, ಪೂವಪ್ಪ ದೇವಾಡಿಗ, ರಾಧಾಕೃಷ್ಣ ಬೆದ್ರಾಳ ಸಹಿತ ಹಲವರು ಉಪಸ್ಥಿತರಿದ್ದರು.










