





ಪುತ್ತೂರು: ಕಲ್ಲಡ್ಕದ ಪ್ರತಿಷ್ಠಿತ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಹತ್ತನೇ ಪದವಿ ಪ್ರದಾನ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ಮರ್ಕಝುಲ್ ಹುದಾ ಪದವಿ ಪೂರ್ವ ಕಾಲೇಜು ಕುಂಬ್ರ ಇದರ ಪ್ರಾಂಶುಪಾಲೆ ಸಂಧ್ಯಾ ಶೆಟ್ಟಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿ ಸಮಯದ ಮಹತ್ವದ ಬಗ್ಗೆ ವಿವರಿಸಿದರು. ಮೊಬೈಲ್ ಬಳಕೆಯನ್ನು ಕನಿಷ್ಠ ಗೊಳಿಸುವುದರ ಮೂಲಕ ಭಾಷಾ ಕೌಶಲ್ಯ ಮತ್ತು ಸಂವಹನ ಸಾಮರ್ಥ್ಯವನ್ನು ವೃದ್ಧಿಸುವಂತೆ ಕರೆ ನೀಡಿದರು.






ಇನ್ನೊರ್ವ ಮುಖ್ಯ ಅತಿಥಿ ಮೂಡಬಿದ್ರೆ ಅಲ್-ಫುರ್ಕಾನ್ ವಿದ್ಯಾ ಸಂಸ್ಥೆಯ ವ್ಯವಸ್ಧಾಪಕಿ ಮುಮ್ತಾಜ್ ಮೊಯ್ದೀನ್ ಕುಂಞ ಮಾತನಾಡಿ, ಜೀವನದಲ್ಲಿ ಅಡೆತಡೆಗಳು ವಿಫಲತೆಗೆ ಕಾರಣಗಳಲ್ಲ, ಬದಲಾಗಿ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಅದಕ್ಕೆ ಸಮರ್ಪಣೆ, ಶ್ರಮ ಮತ್ತು ದೃಢ ಸಂಕಲ್ಪ ಅಗತ್ಯವೆಂದು ತಿಳಿಸಿದರು. ಗುರಿಯ ಕಡೆಗೆ ದೃಢವಾಗಿ ಪ್ರಯತ್ನಿಸುತ್ತಾ ಹೋದರೆ ಯಶಸ್ಸು ಖಚಿತ ಎಂದು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು.
ಸಂಸ್ಧೆಯ ವಾಣಿಜ್ಯ ವಿಭಾಗದ ಉಪನ್ಯಾಸಕಿ ಪ್ರಜ್ಞಾ. ಎಮ್ 2024-25ನೇ ಸಾಲಿನ ಬಿ.ಎ. ಮತ್ತು ಬಿ.ಕಾಂ. ಪದವಿ ಪೂರೈಸಿದ ವಿದ್ಯಾರ್ಥಿನಿಯರ ಪಟ್ಟಿ ವಾಚಿಸಿದರು. ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷÀ ಯಾಸಿನ್ ಬೇಗ್ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ಸ್ಥಾಪನೆ ಮತ್ತು ಕಾಲೇಜಿನಲ್ಲಿ ನೀಡುತ್ತಿರುವ ಮೌಲ್ಯಧಾರಿತ ಶಿಕ್ಷಣದ ಬಗ್ಗೆ ತಿಳಿಸಿ, ಸಂಸ್ಧೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿನಿಯರು ಗುಣಮಟ್ಟದ ಶಿಕ್ಷಣವನ್ನು ಪಡೆದು ಉತ್ತಮ ಪ್ರಜೆಯಾಗಿ ಸಮಾಜದಲ್ಲಿ ಬದುಕಬೇಕೆಂದು ತಿಳಿಸಿದರು.
ಯನಪೋಯ ಇನ್ಸ್ಟಿಟ್ಯೂಟ್ಸ್ ಮಂಗಳೂರು ಇದರ ಉಪನ್ಯಾಸಕಿ ಸಫೀನ ಬಾನು, ಕಾಲೇಜಿನ ಪ್ರಾಂಶುಪಾಲೆ ಡಾ।ಹೇಮಲತ ಬಿ.ಡಿ, ಸಲಹಾ ಸಮಿತಿಯ ಕಾರ್ಯದರ್ಶಿ ತಾರಾಕ್ಷಿ, ಪದವಿ ಪೂರ್ವ ವಿಭಾಗದ ಸಂಯೋಜಕಿ ಮಮಿತಾ ಎಸ್ .ರೈ, ಪದವಿ ವಿಭಾಗದ ಸಂಯೋಜಕಿ ಆಬಿದ. ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನುಗ್ರಹ ವಿದ್ಯಾಸಂಸ್ಥೆಗಳ ಕೋಶಾಧಿಕಾರಿ ಹೈದರ್ ಅಲಿ, ಸಹಕಾರ್ಯದರ್ಶಿ ಅಬ್ದುಲ್ಲಾ ಕುಂಞ, ಕಾಲೇಜಿನ ಸಂಚಾಲಕ ಅಮಾನುಲ್ಲಾ ಖಾನ್, ಆಡಳಿತ ಮಂಡಳಿ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು, ವಿದ್ಯಾರ್ಥಿನಿಯರು ಮತ್ತು ಪೋಷಕರು ಉಪಸ್ಥಿತರಿದ್ದರು.
ಪ್ರಥಮ ವಿಜ್ಞಾನ ವಿಭಾಗದ ಕುಮಾರಿ ನುಹಾ ಮರಿಯಮ್ ಹೈದರ್ ಖಿರಾಅತ್ ಪಠಣದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಖತೀಜ ಮಾಹಿರ ಸ್ವಾಗತಿಸಿ, ದ್ವಿತೀಯ ವಾಣಿಜ್ಯ ವಿಭಾಗದ ಕುಮಾರಿ ಆಸಿಯ ಅಫ್ಸಾನ ವಂದಿಸಿ, ತೃತೀಯ ಬಿ.ಕಾಂ.ವಿಭಾಗದ ಕುಮಾರಿ ಮಶೀದ ಕಾರ್ಯಕ್ರಮವನ್ನು ನಿರೂಪಿಸಿದರು.










