





ಪುತ್ತೂರು : ಉಪ್ಪಿನಂಗಡಿಯ ನಮಿತಾ ಟೆಕ್ಸ್ ಟೈಲ್ಸ್ ಮಾಲೀಕ, ಹೆಬ್ಬಾರಬೈಲಿನ ಎಚ್. ಹರಿದಾಸ ಭಂಡಾರಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ನ.19ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ “ಕುಮಾರಧಾರ ಸಭಾಂಗಣ”ದಲ್ಲಿ ನಡೆಯಿತು.


ಬಂಟ್ವಾಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ, ವಿಜಯಾ ಬ್ಯಾಂಕಿನ ನಿವೃತ್ತ ಹಿರಿಯ ವ್ಯವಸ್ಥಾಪಕ ದಿವಾಕರ ಶಂಭೂರು ಅವರು ಪುತ್ತೂರಿನ ಪ್ರತಿಷ್ಠಿತ ಹೆಬ್ಬಾರಬೈಲು ಮನೆತನದ ಹಿರಿಯ ಕುವರ ಹರಿದಾಸ ಭಂಡಾರಿಯರ ಗುಣಗಾನ ಮಾಡಿ ನುಡಿ ನಮನ ಸಲ್ಲಿಸಿದರು.






ಮಂಗಳೂರು ಅಬಕಾರಿ ಇಲಾಖೆಯ ನಿವೃತ್ತ ಇನ್ಸ್ ಫೆಕ್ಟರ್ ಪ್ರೇಮಾ ಎ. ಕೆ. ಭಂಡಾರಿ, ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷೆ ವಾಣಿ ಶ್ರೀಧರ್, ವಾಮನ ಬಿ.ಕೆ. ಕೈಕಂಬ, ರಘು ಸಕಲೇಶಪುರ, ದಿನೇಶ ಭಂಡಾರಿ ಕುಂತೂರು, ರವಿ ಭಂಡಾರಿ ಕಾಂಪ್ರಬೈಲು ಸಮೇತ ಅನೇಕ ಗಣ್ಯರು ಪಾಲ್ಪಡೆದಿದ್ದರು. ಹರಿದಾಸ ಭಂಡಾರಿ ಪತ್ನಿ ಸುಮತಿ ಭಂಡಾರಿ, ಪುತ್ರರಾದ ಹರ್ಷಿತ್, ಸುಶಾಂತ್, ಸಹೋದರ, ಪೂವರಿ ಮಾಸಿಕ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ಸಹೋದರಿಯರಾದ ಕಲ್ಯಾಣಿ ಆರ್. ಭಂಡಾರಿ ಮೊಟ್ಟೆತಡ್ಕ, ಸರಸ್ವತಿ, ಗುಲಾಬಿ ವಾಮನ್ ಕೈಕಂಬ ಸಹಿತ ಕುಟುಂಬದ ಹಲವಾರು ಸದಸ್ಯರು ಉಪಸ್ಥಿತರಿದ್ದರು.








