





ಪುತ್ತೂರು: ಪುತ್ತೂರು-ಮೊಟ್ಟೆತ್ತಡ್ಕ-ಪಂಜಳ-ನರಿಮೊಗರು ಸಂಪರ್ಕಕ್ಕೆ ಹೊಸ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಶಾಸಕ ಅಶೋಕ್ ರೈ ಅವರು ಚಾಲನೆ ನೀಡಿದ್ದು, ನೂತನ ಬಸ್ ಸಂಚಾರ ಪ್ರಾರಂಭಗೊಂಡ ನ.20ರಂದು ನರಿಮೊಗರು ಜಂಕ್ಷನ್ನಲ್ಲಿ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ನೇತೃತ್ವದಲ್ಲಿ ಬಸ್ಗೆ ಸ್ವಾಗತಿಸುವ ಕಾರ್ಯಕ್ರಮ ನಡೆಯಿತು. ಸಿಹಿತಿಂಡಿ ಹಂಚುವ ಮೂಲಕ ಸಂಭ್ರಮಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯಾಕೂಬ್ ಮುಲಾರ್ ಸ್ವಾಗತಿಸಿ ಮಾತನಾಡಿ ಶಾಸಕರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.



ಈ ಸಂದರ್ಭದಲ್ಲಿ ಬ್ಲಾಕ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ನೀರ್ಪಾಡಿ, ಬ್ಲಾಕ್ ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೇದನಾಥ್ ಸುವರ್ಣ ನರಿಮೊಗರು, ಮುಂಡೂರು ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಶ್ರಫ್ ಮುಲಾರ್, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ, ಯೋಗೀಶ್ ನಾಯ್ಕ್ ಶಾಂತಿಗೋಡು, ಡಿಪೋ ಮೇನೇಜರ್ ಸುಬ್ರಹ್ಮಣ್ಯ ಪ್ರಕಾಶ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ್ ರೈ ನರಿಮೊಗರು, ಬೂತ್ ಅಧ್ಯಕ್ಷ ಗಣೇಶ್ ಬಂಗೇರ ಕೊರುಂಗು, ಪದ್ಮಯ್ಯ ಬಂಡಿಕಾನ, ಇಬ್ರಾಹಿಂ ಮುಲಾರ್, ಅಣ್ಣಿ ಪೂಜಾರಿ ಹಿಂದಾರ್, ಪುತ್ತು ಕೊಂಬಳ್ಳಿ, ಮಹಮ್ಮದ್ ಪಾಪೆತ್ತಡ್ಕ, ವಸಂತ ನಾಯ್ಕ್ ಸೇರಾಜೆ, ಅಚ್ಯುತ ಗೌಡ ಸೇರಾಜೆ, ಕೃಷ್ಣಪ್ಪ ಸೇರಾಜೆ, ಗಣೇಶ್ ನಾಯಕ್ ನರಿಮೊಗರು, ಗುರುರಾಜ್ ಪುತ್ತೂರಾಯ ಹಾಗೂ ಸಾರ್ವಜನಿಕರು, ವಿದ್ಯಾರ್ಥಿಗಳು, ನರಿಮೊಗರು ಐಟಿಐ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರವೀಣ್ ಆಚಾರ್ಯ ವಂದಿಸಿದರು.















