





ಪಾಣಾಜೆ: ಪಾಣಾಜೆ ಉನ್ನತ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.20 ರಂದು ನಡೆದ ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ. ಸೂರಂಬೈಲು ಇಲ್ಲಿನ ವಿದ್ಯಾರ್ಥಿಗಳು ಹಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.


ಹಿರಿಯ ವಿಭಾಗದ ಕಥೆ ಹೇಳುವ ಸ್ಪರ್ಧೆ ವೃಂದ.ವಿ ಪ್ರಥಮ, ಮಿಮಿಕ್ರಿ ವಿನಾಯಕ ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣ ವಿನಾಯಕ ದ್ವಿತೀಯ, ಆಶುಭಾಷಣ ಚಿಂತನ್ ದ್ವಿತೀಯ,ಹಿಂದಿ ಕಂಠಪಾಠ ಚಿಂತನ್ ದ್ವಿತೀಯ, ಪಯಸ್ವಿನಿ ಚಿತ್ರಕಲೆ ತೃತೀಯ ಹಾಗೂ ರಚನಾ ಭರಣ್ಯ ಕಿರಿಯರ ವಿಭಾಗದ ಸಂಸ್ಕೃತ ಧಾರ್ಮಿಕ ಪಠಣ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.





ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಮುಖ್ಯಗುರುಗಳು, ಶಿಕ್ಷಕ ವೃಂದ,ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕ ವೃಂದ ಹಾಗೂ ಹಿರಿಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.










