





ನಿಡ್ಪಳ್ಳಿ; ಪಾಣಾಜೆ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 20 ರಂದು ನಡೆದ ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನಿಡ್ಪಳ್ಳಿ ಹಿರಿಯ ಪ್ರಾಥಮಿಕ ಶಾಲೆ ಹಲವು ಪ್ರಶಸ್ತಿಗಳನ್ನು ಪಡೆದು ಕೊಂಡಿದೆ.


ಛದ್ಮವೇಷ ಸ್ಪರ್ಧೆಯಲ್ಲಿ ಮೋಕ್ಷಿತ ಪ್ರಥಮ, ದೇಶಭಕ್ತಿ ಗೀತೆಯಲ್ಲಿ ಕೃಪಾಶ್ರೀ ಪ್ರಥಮ,ಕಥೆ ಹೇಳುವುದು ಮೋಕ್ಷಿತಾ ಪ್ರಥಮ,ಭಕ್ತಿಗೀತೆ ಶರಣ್ಯ ತೃತೀಯ,ಹಿರಿಯ ವಿಭಾಗದಲ್ಲಿ ದೇಶ ಭಕ್ತಿ ಗೀತೆ ಮತ್ತು ಭಕ್ತಿ ಗೀತೆಯಲ್ಲಿ ಭವ್ಯಶ್ರೀ ತೃತೀಯ ಪ್ರಶಸ್ತಿ ಪಡೆದು ಕೊಂಡಿದ್ದಾರೆ ಎಂದು ಮುಖ್ಯ ಗುರು ಹೇಮಾ. ಎನ್ ತಿಳಿಸಿದ್ದಾರೆ.ಅತಿಥಿ ಶಿಕ್ಷಕಿಯರಾದ ಸುಮ.ಡಿ, ಸುಜಾತ ತರಬೇತಿ ನೀಡಿದ್ದಾರೆ.














